|| ರಾಮ ಸ್ತುತಿ ||
ರಾಗ : ಕಮಾಚ್
ತಾಳ : ಆದಿ
ಪ || ರಾಮಾ ರಾಮಾ ಎನ್ನಿರೋ | ಇಂಥಾ |
ಸ್ವಾಮಿಯ ನಾಮವ | ಮರೆಯದಿರೋ ||
ರಾಮಾ ರಾಮಾ ಎನ್ನಿರೋ ||
1. || ತುಂಬಿದ ಪಟ್ಟಣಕ್ಕೆ | ಒಂಬತ್ತು ಬಾಗಿಲು ||
ಸಂಭ್ರಮದರಸುಗಳು | ಐದು ಮಂದಿ ||
ಡಂಭಕತನದಿಂದ | ಕಾಯುವ ಜೀವನ |
ನಂಬಿ ನೆಚ್ಚಿ ನೀವು ಕೆಡಬೇಡಿರೋ
|| ರಾಮಾ ರಾಮಾ ||
2. || ನೆಲೆಯಿಲ್ಲದೀಕಾಯ | ಎಲುಬಿನ ಹಂದರ ||
ಒಲಿದು ಸುತ್ತಿದ ಈ|ಚರ್ಮದ ಹೊದಿಕೆ ||
ಮಲಮೂತ್ರಂಗಳ|ಕೀವು ಕ್ರಿಮಿಗಳ ಚೆಲುವ
ದೇಹವ ನೆಚ್ಚಿ ಕೆಡಬೇಡಿರೋ ||
|| ರಾಮಾ ರಾಮಾ ||
3. || ಹರಬ್ರಹ್ಮ ಸುರರಿಂದ|ವಂದಿಪನಾಗಿರ್ಪ ||
ಹರಿಯೇ ಸರ್ವೋತ್ತಮ|ಎಂದೆನ್ನಿರೋ ||
ಪುರಂದರ ವಿಠಲನ|ಸ್ಮರಣೆಯ ಮಾಡಲು |
ದುರಿತಗಳೆಲ್ಲವ ಪರಿಹರಿಸೋ ||
|| ರಾಮಾ ರಾಮಾ ||
0 ಕಾಮೆಂಟ್ಗಳು