|| ಲಕ್ಷ್ಮಿ ಸ್ತುತಿ ||
ರಾಗ : ನಾದನಾಮಕ್ರಿಯೆ
ತಾಳ : ಛಾಪು
ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೋ
ಸಾನುರಾಗದಿಂದ ಹರಿಯ ।
ತಾನೇ ಸೇವೆ ಮಾಡುತಿಹಳು || ಅ.ಪ ||
ಕೋಟಿ ಕೋಟಿ ಭೃತ್ಯರಿರಲು ।
ಹಾಟಕಾಂಬರನ ಸೇವೆ ।
ಸಾಟಿಯಿಲ್ಲದೆ ಮಾಡಿ ಪೂರ್ಣ ।
ನೋಟದಿಂದ ಸುಖಿಸುತಿಹಳು || ೧ ||
ಛತ್ರ ಚಾಮರ ವ್ಯಜನ ಪರಿಯಂಕ ।
ಪಾತ್ರರೂಪದಲ್ಲಿ ನಿಂತು
ಚಿತ್ರ ಚರಿತನಾದ ಹರಿಯ |
ನಿತ್ಯಸೇವೆ ಮಾಡುತಿಹಳು ||೨ ||
ಸರ್ವತ್ರದಿ ವ್ಯಾಪ್ತನಾದ ।
ಸರ್ವದೋಷರಹಿತನಾದ
ಶರ್ವವಂದ್ಯನಾದ ಪುರಂದರ
ವಿಠ್ಠಲನ್ನ ಸೇವಿಸುವಳು ||೩||
0 ಕಾಮೆಂಟ್‌ಗಳು