ಚೆನ್ನಬಸವ
ರಾಗ : ಮೋಹನ
ತಾಳ : ಆದಿ
||ಚೆನ್ನ ಬಸವ ಸನ್ನುತಾಂಗ |
ಎನ್ನ ಭವವ |ಮುನ್ನ ಕಳೆವ
ಪನ್ನಂಗೇಶ ಪರಮಾನಂದ |
ಹೊನ್ನುತಾ ಶ್ರೀಶೈಲ ವಾಸ ||
ಚೆನ್ನಬಸವಾ ||
|| ಹಾಲು ಮಾರೋ |ಗೊಲ್ಲತಿಯು |
ಕಾಲುಜಾರಿ|ಬಸವ ಎನ್ನಲು ||
ಹಾಲಿನ ಬಿಂದಿಗೆಯನ್ನು |
ಮೇಲೆ ಹಿಡಿದ |ಶೂಲ ಧರನೇ||
ಚೆನ್ನಬಸವಾ ||
||ಮರದ ಕಟ್ಗೆಯಲಿ|ಗೊಂಬೆ ಮಾಡಿ|
ಶರಣುತಾಂಗ|ಎಂದು ಬೇಡಿ||
ಮರದ ಕಟ್ಗೆ ಮಹಿಮೆಯಿಂದ|
ಹರನೇ ಪರಮ ಗುರುವೇ ಎಂದು||
ಚೆನ್ನಬಸವಾ||
||ಮಂಗಳಾಂಗ ಮಹಿಮೆ ಜಾಲ|
ಚಂದ್ರಮೌಳಿ ಎಂದು ಹೇಳಿ||
ಕಂಗಳಿಂದ ಅಂಗವನು|
ಭಂಗಪಡಿಸಿದಾ ಲಿಂಗದೇವಾ||
ಚೆನ್ನಬಸವಾ||
0 ಕಾಮೆಂಟ್‌ಗಳು