|| ರಾಮ ಸ್ತುತಿ ||
ರಾಮ ಹರೇ ಪಾಹಿ ರಾಮ ಹರೇ ಪಾಹಿ
ರಾಮ ಹರೇ ಎಂದು ಭಜಿಸುವೆವು
ರಘು ರಾಮ ಹರೇ ಎಂದು ಭಜಿಸುವೆವು
ಸೀತಾ ರಾಮ ಹರೇ ಎಂದು ಭಜಿಸುವೆವು
ದಶರಥ ರಾಮ ಹರೇ ಎಂದು ಭಜಿಸುವೆವು||ಪ||
ನಿರುತವೂ ನಿಮ್ಮಯ ಚರಣವ ನಂಬಿದೆ
ದುರಿತ ಭಯಂಗಳ ಪರಿಹರಿಸೋ ||೧||
ಅಜಭವ ವಂದ್ಯನೆ ಅಗಣಿತ ಮಹಿಮನೆ
ಸುಜನರ ಪಾಲಿಪ ಸುವ್ರತನೆ ||೨||
ಸನಕ ಸನಂದನ ವಂದಿತ ನಿಮ್ಮನು
ಸಲಹೋ ನೀನತಿಶಯ ಸುಖಕರನೇ ||೩||
ಪಾಂಡವ ಪುರಜನ ಪಾಲನೆ ನಿರುತವು
ಭೂಮಂಡಲ ನಾಯಕ ಸಲಹೋ ಬೇಗ ||೪||
0 ಕಾಮೆಂಟ್‌ಗಳು