||ಕೇಶವ ದೇವರಿಗೆ ಆರತಿ ಹಾಡು||
ರಾಗ : ಸುರಟಿ
ತಾಳ : ಧ್ರುವ
ಆರತಿಯನೆತ್ತಿದರೆ ಕೇಶವ ನಾರಾಯಣಗೆ
ಶಾಶ್ವತವೀವ ಮಾಧವ ||ಪ||
ವಾಸವವಂದ್ಯ ಗೋವಿಂದಗಾರತಿಯನೆತ್ತಿದರೆ||ಅ.ಪ.||
ದ್ವಾಪರರಹಿತ ಶ್ರೀವಿಷ್ಣುವಿಗೆ ಅಪಾರ ಮಧುಸೂದನಗೆ
ಪಾಪರಹಿತ ತ್ರಿವಿಕ್ರಮಗಾರತಿಯನೆತ್ತಿದರೆ||೧||
ಸಾಧುಸೇವಿತ ವಾಮನಗೆ ಶ್ರೀಧರ ಹೃಷೀಕೇಶನಿಗೆ
ಆದಿಮೂರುತಿ ಪದ್ಮನಾಭಗಾರತಿಯನೆತ್ತಿದರೆ||೨||
ದಾಮಉದರದಾಲುಳ್ಳವಗೆ ಪ್ರೇಮದಿ ಸಂಕರ್ಷಣಗೆ
ಕಾಮಿತಾರ್ಥವನೀವ
ವಾಸುದೇವಗಾರತಿಯನೆತ್ತಿದರೆ ||೩||
ಘನಮಹಿಮ ಪ್ರದ್ಯುಮ್ಮನಿಗೆ
ಅನಿರುದ್ಧ ಪುರುಷೋತ್ತಮಗೆ
ವಿನಯದಿಂದಲಿ ಅಧೋಕ್ಷಜಗಾರತಿಯನೆತ್ತಿದರೆ||೪||
ನರಸಿಂಹ ರೂಪನಾದವಗೆ
ವರದ ಮೂರುತಿ ಅಚ್ಯುತಗೆ
ಅರಿಭಯಂಕರ ಜನಾರ್ದನಗಾರತಿಯನೆತ್ತಿದರೆ||೫||
ಉಪೇಂದ್ರನೆಂದೆನಿಸಿಕೊಂಡವಗೆ
ಅಪಾರಮಹಿಮ ಶ್ರೀಹರಿಗೆ
ಗೋಪಾಲಮೂರುತಿ
ಶ್ರೀಕೃಷ್ಣಗಾರತಿಯನೆತ್ತಿದರೆ||೬||
ಚತುರವಿಂಶತಿ ಮೂರುತಿಗಳಾ
ಅತಿಶಯ ಧವಳವ ಪಾಡೆ
ಸತುಪುರುಷರಿಷ್ಟಾರ್ಥವೀವನು ಸಿರಿ ಹಯವದನ||೭||
0 ಕಾಮೆಂಟ್‌ಗಳು