|| ಶಿವ ಸ್ತುತಿ ||
ಹರನೇ ನಾ ನಿನ್ನ ಪರಿಸರನಯ್ಯ
ಪೊರೆಯೆನ್ನ ಜೀಯಾ॥ಪ॥
ಸುರವರ ಸ್ಮರಮುಖ ಸುರಗಣ ಸೇವ್ಯಸ್ಸಿ
ನರವರಗೇ ನೀ ಹರಿಮಹಿಮೆಯ ಪೇಳಿದೆ ॥ಅ.ಪ॥
ಅಂಬಾಧವ ಹೇರಂಭನ ತಾತ್ರ ಶರಜನ್ಮನ ಪಿತ
ಶಂಭಾರಾರಿಯು ಭಯ ನಿರ್ಜೀತ
ಸುರವರನಾಥ ಕುಂಭಿಣಿ ರಥ ಹರ ಶಂಭೋ ಶಂಕರ
ಶಿವ ನಂಬಿದೆ ನಿನ್ನನು ತ್ರ್ಯಂಬಕ ಪಾಲಿಸೋ॥೧॥
ಗಂಗಾಧರ ದಿಗಂಬರಾವೇಶ ಧರಿಸಿದ ಈಶ
ಲಿಂಗಾಕಾರದಿ ಜನಮನ ತೋಷ ಮಾಡುವಿ ಜಗದೀಶ
ಮಂಗಳಕರ ಭವ ಸಂಗ ವಿವರ್ಜಿತ
ತುಂಗ ಮಹಿಮ ಭಷಿತಾಂಗ ಶುಭಾಂಗ ||೨||
ದಾತಾ ಗುರು ಜಗನ್ನಾಥ ವಿಠಲ ದೂತ
ಪ್ರೀತಾನಾಗೆನ್ನೆಯ ಮಾತಾ ಲಾಲಿಸೋ ಖ್ಯಾತ
ಪಾತಕ ಕಾನನ ವೀತಿ ಹೋತ್ರ ಶುಭ
ವ್ರಾತನ ಪಾಲಿಸ್ಯಾನಾಥನ ಪೊರೆಯೋ ॥೩॥
0 ಕಾಮೆಂಟ್‌ಗಳು