ನಾರೀಮಣಿಯರೆಲ್ಲ ಸಾರಸಗುಣಮಣಿಗೆ - Narimaniyarella saarasa gunamanige

|| ನವರಾತ್ರಿ ಹಾಡು ||



ನಾರೀಮಣಿಯರೆಲ್ಲ ಸಾರಸಗುಣಮಣಿಗೆ

ಆರೋಗಣೆಯ ಮಾಡಿ ಬನ್ನೀರೆ/

ಗಿರಿಜಾತೆ ಶಿವನರಸಿ ಶೈಲಪುತ್ರಿಗಿಂದು

ಮುದ್ಗಾನ್ನವ ನೀಡೋಣ ಬನ್ನೀರೆ //೧// 


ಮೊಸರನ್ನ ತನ್ನಿರಿ ಬ್ರಹ್ಮಚಾರಿಣಿಗೀಗ

ಜ್ಞಾನವ ನೀಡೆಂದು ಬೇಡಿರೆ/ 

ಬೆಲ್ಲದ ಸವಿ ಪಾಯಸ ಮೆಲ್ಲಗೆ ತನ್ನೀರೆ

ಚಂದ್ರಘಂಟಾ ದೇವಿ ಗೆ ಬಡಿಸೀರೆ //೨// 


ಒಪ್ಪದಲಿ ಮಾಡಿದ ತುಪ್ಪದನ್ನವ ತಂದು

ಕೂಷ್ಮಾಂಡಾದೇವಿಗೆ ನೀಡಿರೆ/

ಸ್ಕಂದಮಾತೆಗೀಗ ಅಂದದ ಪಾಯಸವ ತಂದು

ನೈವೇದ್ಯವ ಮಾಡೀರೆ //೩// 


ಹಿಗ್ಗಿನಿಂದಲಿ ಮಾಡಿ ಹುಗ್ಗಿಯ ತನ್ನಿರೆ

ಕರುಣಾಳು ಕಾತ್ಕಾಯಿನಿಗೆ ನೀಡಿರೆ

ಎರಿಯಪ್ಪದ ಜೊತೆಗೆ ಎಲ್ಲಾ ಬಗೆಯನ್ನವ

ಕಾಲರಾತ್ರಿಯ ಕರೆದು ನೀಡೀರೆ //೪// 


ತಾಯಿ ಮಹಗೌರಿಗೆ ಪ್ರಿಯವು ಗುಡಾನ್ನವು

ಜೊತೆಗೆ ಆಂಬೊಡೆಯನು ನೀಡೀರೆ 

ಸರ್ವ ಸಿದ್ದಿಧಾತ್ರಿಗೆ ಶಾಲ್ಯಾನ್ನವ ನೀಡಿರೆ

ಸರ್ವ ವಿಘ್ನಗಳ ಕಳೆಯೆನ್ನಿರೆ //೫// 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು