|| ಶಿವ ಸ್ತುತಿ ||
ಹರನೇ ನಾ ನಿನ್ನ ಪರಿಸರನಯ್ಯಾ |
ಪೊರೆಯೆನ್ನ ಜೀಯಾ || ಪ ||
ಸುರವರ ಸ್ಮರಮುಖ ಸುರಗಣ ಸೇವ್ಯ ಸ್ಪಿ |
ನರವರಗೆ ನೀ ಹರಿ ಮಹಿಮೆಯ ಪೇಳಿದೆ || ಅಪ ||
ಅಂಬಾಧವ ಹೇರಂಬನ ತಾತ್ರ ಶರಜನ್ಮನ ಪಿತ
ಶಂಭರಾರಿಯು ಭಯ ನಿರ್ಜೀತ |
ಸುರವರನಾಥ ಕುಂಭಿಣಿ ರಥ ಹರ
ಶಂಭೋ ಶಂಕರ ಶಿವ ನಂಬಿದೆ ನಿನ್ನನು ತ್ರ್ಯಂಬಕ ಪಾಲಿಸೋ ||೧||
ಗಂಗಾಧರ ದಿಗಂಬರಾವೇಶ ಧರಿಸಿದ ಈಶ
ಲಿಂಗಾಕಾರದಿ ಜನಮನ ತೋಷ ಮಾಡುವಿ ಜಗದೀಶ
ಮಂಗಳಕರ ಭವ ಸಂಗ ವಿವರ್ಜಿತ
ತುಂಗ ಮಹಿಮ ಭಸಿತಾಂಗ ಶುಭಾಂಗ ||೨||
ದಾತ ಗುರು ಜಗನ್ನಾಥ ವಿಠಲ ದೂತ
ಪ್ರೀತಾನಾಗೆನ್ನೆಯ ಮಾತಾ ಲಾಲಿಸೋ ಖ್ಯಾತ
ಪಾತಕ ಕಾನನ ವೀತಿ ಹೋತ್ರ ಶುಭ
ವಾತವ ಪಾಲಿಸನಾಥನ ಪೊರೆಯೋ ||೩||
0 ಕಾಮೆಂಟ್ಗಳು