|| ಲಕ್ಷ್ಮಿ ಹಾಡು ||
ಅಂಗನಾ ರಮಣಿ ರಂಗನಾ ರಾಣಿ
ಉಡುಪಿ ಶ್ರಿಕೃಷ್ಣನಾ ಜೊತೆಗೂಡಿ ಬಾರೆಂದು
ಅಂಗನೆಯರು ಕೂಡಿ ಸ್ವರಸಂಗೀತದಲಿ ಹಸೆಗೆ ಕರೆದರು..
ಅಂಗಜ ಪಿತನರ್ಧಾಂಗಿ ನೀ ಏಳು
ಶೃಂಗಾರದಂಥ ಶುಭಾಂಗಿ ನೀ ಏಳು
ಕಂಗಳ ನೋಟದ ಕಡು ಚೆಲ್ವೆ ನಿನ್ನ
ಪಾದಂಗಳಿಗೆರಗುವೆ ಎನುತ ಮಾಲಕ್ಷುಮಿಯ
ಅಂಗನೆಯರ್ಹಸೆಗೆ ಕರೆದರು||
ಅಜನ ಜನಕನರಗಿಳಿಯೆ ನೀ ಏಳು
ಪದಮನಾಭನ ಪಟ್ಟದರಸಿ ನೀ ಏಳು
ತ್ರಿಜಗ ಭೂಷಿತನೆದೆ ಮ್ಯಾಲೆ ಹೊಂದಿರುವಂಥ
ಮದಗಜ ಗಮನೆ ಮಾಲಕ್ಷ್ಮಿ ಬಾರೆನುತಲಿ
ಮುದದಿಂದಲಿ ಹಸೆಗೆ ಕರೆದರು ||
ಸೋಮ ವದನೆ ಸುಗುಣೆ ಜಾಣೆ ನೀ ಏಳು
ಕೋಮಲ ಕೋಕಿಲವಾಣಿ ನೀ ಏಳು
ಹೇಮಮಾಣಿಕ್ಯ ನಾಗವೇಣಿಯೆ
ನಮ್ಮ ಭೀಮೇಶ ಕೃಷ್ಣನ ನಿಜರಾಣಿ
ಮಾಲಕ್ಷುಮಿ ಪಟ್ಟದರಾಣಿ
ಬಾ ಎಂದು ಹಸೆಗೆ ಕರೆದರು||
0 ಕಾಮೆಂಟ್ಗಳು