|| ಹರಿ ಸ್ತುತಿ ||
ರಚನೆ : ಪುರಂದರದಾಸರು
ನರಜನ್ಮ ಸ್ಥಿರವೆಂದು ನಾನಿದ್ದೆನೋ ರಂಗ
ಬರಿದೇ ಕಾಲ ಕಳೆದೆನೊ ಹರಿಯೇ
ಆಸೆಯೆಂಬುದು ಎನ್ನ ಕ್ಲೇಷಪಡಿಸುತಿದೆ
ಘಾಸಿಯಾದೆನೊ ಹರಿ ನಾರಾಯಣ
ವಾಸುದೇವನೇ ನಿನ್ನಧ್ಯಾನವ ಮಾಡದೆ
ನಾಶವಾಯಿತು ಜನ್ಮ ಮೋಸಹೋದೆನೊ ಕೃಷ್ಣ
ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ
ಮರುಳುತನದಲಿ ಮತಿಹೀನನಾದೆ
ನೆರೆನಂಬಿದೆನೊ ಕೃಷ್ಣಾ ಕರುಣದಿಂದಲಿ ಎನ್ನ
ಮರೆಯದೆ ಸಲಹಯ್ಯ ಪುರಂದರ ವಿಠ್ಠಲ
ಓಂ ನಮೋ ಭಗವತೇ ವಾಸುದೇವಾಯ
0 ಕಾಮೆಂಟ್‌ಗಳು