ಬಾರೋ ಗುರು ರಾಘವೇಂದ್ರ - Baaro Guru Raghavendra

|| ರಾಘವೇಂದ್ರ ಭಜನೆ ||




ಬಾರೋ ಗುರು ರಾಘವೇಂದ್ರ

ಬಾರಯ್ಯಾ ಬಾ ಬಾ

ಹಿಂದು ಮುಂದಿಲ್ಲನಗೆ ನೀ ಗತಿ ಎಂದು

ನಂಬಿದೆ ನಿನ್ನ ಪಾದವ |ಪ|

ಬಂಧನವ ಬಿಡಿಸೆನ್ನ ಕರಪಿಡಿ

ನಂದಕಂದ ಮುಕುಂದ ಬಂಧೋ |ಅ.ಪ|


ಸೇವಕನೇಲೊ ನಾನು ಧಾವಿಸಿ ಬಂದೆನೊ

ಸೇವೇಯ ನೀಡೊ ನೀನು ಸೇವಕನ ಸೇವೆಯನು ಸೇವಿಸಿ

ಸೇವ್ಯ ಸೇವಕ ಭಾವವಿಯುತ ಠಾವು ಗಾಣಿಸಿ ಪೊರೆಯೊ

ಧರೆಯೊಳು ಪಾವನಾತ್ಮಕ ಕಾಯ್ವ ಕರುಣೆ ||೧||


ಕರೆದರೇ ಬರುವಿಯೆಂದು ಸಾರುವುದು ಡಂಗುರ

ತ್ವರಿತದಿ ಒದಗೋ ಬಂದು ಜರಿಯಬೇಡವು ಬರಿದೆ

ನಿಮ್ಮಯ ವಿರಹ ತಾಳದೆ ಮನದಿ ಕೊರಗುವೆ

ಹರಿಯ ಸ್ಮರಣೆಯ ನಿರುತದಲಿ ಎನ್ನ 

ಹರುಷದಲಿ ನೀ ನಿರುತ ಕೊಡುತಲಿ ||೨||


ನರಹರಿ ಪ್ರಿಯನೆ ಬಾ ಗುರುಶೇಷವಿಠಲನ

ಕರುಣ ಪಾತ್ರನೆ ಬೇಗ ಬಾ ಗುರುವರನೆ ಪರಿಪೋಷಿಸೆನ್ನನು

ಮರೆಯದಲೆ ತವಚರಣ ಕೋಟೀಯ -ಲಿರಿಸಿ

ಚರಣಾಂಬುಜವ ತೋರುತ ತ್ವರಿತದಲಿ ಓಡೋಡಿ ಬಾ ಬಾ ||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು