ಬ್ರಹ್ಮಾದಿಗಳು ಕ್ಷೀರ ಸಾಗರಕ್ಕೆ ಹೋಗಿ - Brahmadigalu Ksheera Sagarake Hogi

 || ಲಾಲಿ ಹಾಡು ||



ಲಾಲಿ ಶ್ರೀ ಹಯವದನ ಲಾಲಿ ರಂಗವಿಠಲ

ಲಾಲಿ ಶ್ರೀ ಗೋಪಿನಾಥ ಲಕ್ಷ್ಮಿ ಸಮೇತ ಲಾಲಿ||


ಬ್ರಹ್ಮಾದಿಗಳು ಕ್ಷೀರ ಸಾಗರಕ್ಕೆ ಹೋಗಿ

ಲಕ್ಷ್ಮೀನಾರಾಯಣರ ಚರಣಕ್ಕೆ ಎರಗಿ

ಭೂ ಭಾರ ಹರಣ ವನ್ನು ಮಾಡಬೇಕಾಗಿ

ಇಳೆಯೊಳು ಮನುಜನ ಅವತಾರವಾಗಿ ಲಾಲಿ||೧||


ಸೂರ್ಯವಂಶದ ರಾಜ ದಶರಥನು

ಸಂತಾನ ವಾಗಬೇಕೆಂದು ಪ್ರಾರ್ಥಿಸಿದ

ಆಶ್ರಮಕ್ಕೆ ಹೋಗಿ ವಸಿಷ್ಠರನ್ನು ಕರೆಸಿ

ಪುತ್ರಕಾಮೇಷ್ಟಿ ಎಂಬ ಯಜ್ಞ ಮಾಡಿಸಿದ ಲಾಲಿ||೨||


ಚೈತ್ರ ಶುದ್ಧ ನವಮಿ ಬುಧವಾರದಂದು

ಶ್ರೀರಾಮ ಜನಿಸಿದನು ಕೌಶಲ್ಯ ಎಲ್ಲಿ

ಸಂತೋಷವಾಯಿತು ಅಯೋಧ್ಯ ಪುರದಲ್ಲಿ

ಸುರರು ಪುಷ್ಪದ ಮಳೆಯ ಕರೆದ ರಾಗಲ್ಲಿ ಲಾಲಿ||೩||


ನಾಮಕರಣ ಮಾಡಿ ಸಂತೋಷಪಡುತ್ತ

ಶ್ರೀರಾಮ ಎಂದೆಂದೂ ಹೆಸರನ್ನು ಇಡುವುದು

ನಾಲ್ಕು ವೇದಗಳಿಂದ ವಿಸ್ತರಿಸಿ ಪೋಗಳುತ್ತ

ಶ್ರೀ ಪುರಂದರವಿಠಲನ ಪಾಡಿ ತೂಗಿದರು ಲಾಲಿ||೪||


ಲಾಲಿ ದಶರಥ ರಾಮ ಲಾಲಿ ರಘುರಾಮ

ಲಾಲಿ ಸೀತಾರಾಮ ಲಾಲಿ ಜಯರಾಮ 

ಜೋ ಜೋ ಜೋ ಜೋ ||೫||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು