ರಾಮ ಪಾಲಿಸೋ ರಘುರಾಮ ಪಾಲಿಸೋ - Rama Paliso rRaghu Rama Paliso

|| ರಾಮ ಭಜನೆ ||




ರಾಮ ಪಾಲಿಸೋ ರಘುರಾಮ ಪಾಲಿಸೋ 

ಸೋಮಶೇಖರಪ್ರಿಯ ಬಂದೆನ್ನ ರಕ್ಷಿಸೊ

ತಾಮಸ ಮಾಡದೆ ಬಂದು ನೀನು ಹರಸೊ ||


ರಘುಕುಲೋತ್ತಮನೆ ಶಿವಧನು ಭಂಜನನೆ

ಅಘಗಳ ಹರಿಸೊ ಹೇ ಪುರುಷೋತ್ತಮನೆ

ಅಘಹರ ಸ್ವಾಮಿ ಅಘಾಟ ರಾಜಾರಾಮನೆ ||


ಅಗಣಿತ ಮಹಿಮ ಸುಗುಣವಂತ ರಾಮನೆ

ನಿಗಮಕೆ ಸಿಲುಕದ ಸದಭಿಮಾನಿಯು ನೀನೆ

ಅಗಣ್ಯ ನಿನ್ನ ಚರಿತೆ ಎಂತು ಉಸುರಬಲ್ಲೆನೆ ||


ತನುಮನ ಧನವೆಲ್ಲ ನಿನಗೆ ಅರ್ಪಿತ ರಾಮ

ಅನುದಿನ ನಿನ್ನ ಸ್ಮರಿಪ ಮನ ನೀಡು ರಾಮ

ಭಾನುವಂಶ ಲಲಾಮ ಸಾಧುವಂದಿತ ರಾಮ ||


ಪಾಹಿರಾಮ ಪಾಹಿ ಪಾದಸೇವೆ ಕರುಣಿಸೊ ತ್ರಾ

ಹಿಯೆಂದು ಬೇಡುವೆ ಎನ್ಕೊರೆ ಆಲಿಸೊ

ದೇಹಿಶ್ಯಾಮ ನಿನ್ನ ನಾಮಸುಧೆ ಅನುಗ್ರಹಿಸೊ ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು