|| ವೆಂಕಟಾಚಲಯ್ಯ ಸ್ತುತಿ ||
ನಿನ್ನ ಕರುಣೆ ದೊಡ್ಡದೊ ಸದ್ಗುರುನಾಥ
ನಿನ್ನ ಕರುಣೆ ದೊಡ್ಡದೊ ||ಪ||
ಕಂಡು ಅರಿಯದ ಗುರುವ ನಂಬದೆ ಕರೆದರೆ
ಕಾಣದ ಮಗುವ ತಾಯಂತೆ ಬಂದ್ಯಲ್ಲೊ
ನಿನ್ನ ಕರುಣೆ ದೊಡ್ಡದೊ||೧||
ಒಮ್ಮೆ ಪೊರೆವುದು ಪುಣ್ಯ ಮತ್ತೆ ಪೊರೆದರೆ ದೈವ
ನಿತ್ಯ ಪೊರೆವ ನಿನ್ನ ಏನೆಂದು ಕರೆಯಲಿ
ನಿನ್ನ ಕರುಣೆ ದೊಡ್ಡದೊ||೨||
ಸಾವಿರ ವರುಷದ ಕತ್ತಲೆ ಕೋಣೆಗೆ
ನೀನೆ ಬಾಗಿಲ ತೆಗೆದು ರವಿಯಂತೆ ನಿಂದ್ಯಲ್ಲೊ
ನಿನ್ನ ಕರುಣೆ ದೊಡ್ಡದೊ||೩||
ಕೆಸರಿನ ಕೊಳೆಯಲ್ಲಿ ಕಮಲದ ಹೂವೇನೊ
ನನ್ನಂಥ ಪಾಮರಗೆ ನಿನ್ನಂಥ ಗುರುವೇನೊ
ನಿನ್ನ ಕರುಣೆ ದೊಡ್ಡದೊ||೪||
0 ಕಾಮೆಂಟ್‌ಗಳು