||ದಶಾವತಾರ ಹಾಡು ||
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರೇ ಪೇಳೆ ಸಖಿ।
ಕ್ಷೀರ ಸಾಗರದಲ್ಲಿ ಶಯನವ ಮಾಡಿದ
ಆದಿನಾರಾಯಣನ ನೋಡೇ ಸಖಿ ॥॥
ಕಾಲಿಲ್ಲದಲ್ಲೇ ಓಡಿ । ಎವೆಯಿಕ್ಕದಲೆ ನೋಡಿ ।
ಮಿಂಚಿನಂದ್ದೊಳೆಯುವ ನ್ಯಾರೆ ಸಖಿ ।
ವೇದವ ತಂದು ಸುರರಿಗೆ ಕೊಟ್ಟಂಥ ।
ಮತ್ಸ್ಯಾವತಾರವ ನೋಡೇ ಸಖಿ ॥೧॥
ತಲೆಯ ತಗ್ಗಿಸುವನು । ಕಡಲೊಳು ಆಡುವ |
ಕಡೆದರೆ ಕಡಗೋಲನ್ಯಾರೆ ಸಖಿ ಆಹಾ ।
ಸುರರು ದೈತ್ಯರು ಕೂಡಿ ಒಂದಾಗಿ ಮಧಿಸಲು ।
ಕೂರ್ಮಾವತಾರನೇ ಇಂದು ಮುಖಿ ॥೨॥
ಮಾರಿ ತಗ್ಗಿಸುವನು । ಮಣ್ಣು ಚಿಮ್ಮಿ ಓಡುವ ।
ಉನ್ನಂತ ದೋರೆದಾಡೇನ್ಕಾರೆ ಸಖಿ ॥
ದುರುಳನ್ನ ಕೊಂದು ಧರಣಿಯತಂದಂಥ ।
ವರಹಾವತಾರನೇ ವಾರೀಜಾಕ್ಷಿ ॥೩||
ಕಂಭದಿಂದಲಿ ಬಂದು । ಕರುಳನ್ನೆ ಬಗೆದು ।
ಕೊರಳೋಳು ಹಾಕಿದನ್ಶಾರೆ ಸಖಿ ।
ನರಮ್ಯಗ ರೂಪದಿ ಉದರವ ಸೀಳಿದ ।
ನರಸಿಂಹನ ರೂಪ ನೋಡೇ ಸಖಿ ॥೪॥
ಪುಟ್ಟಪಾದದಿಂದ ಸೃಷ್ಠಿಯನಳೆದ ।
ಪುಟ್ಟ ಬ್ರಹ್ಮಚಾರಿಯಾರೆ ಸಖಿ ।
ಕೊಟ್ಟದ್ದು ಸಾಲದೇ ಮೆಟ್ಟದ ಶಿರವನು ।
ಪುಟ್ಟ ವಾಮನ ರೂಪ ನೋಡೇ ಸಖಿ ॥೫||
ಕೋಪದಿಂದಲಿ ಬಂದು । ಕೊಡಲಿಯನ್ನೇ ಹಿಡಿದು ।
ಕುಲವನ್ನೇ ಸವರಿದ ಯಾರೇ ಸಖಿ ।
ರಕ್ತದೊಳೆ ಸ್ನಾನ ತರ್ಪಣ ಮಾಡಿದ
ವಿಪ್ರ ಭಾರ್ಗವ ರಾಮ ನೋಡೇ ಸಖಿ ॥೬।|
ಶೀಘ್ರದಿಂದಲಿ ಬಂದು । ಶಬರಿ ಎಂಜಲನುಂಡು ।
ಸೇತುವೆ ಬಂಧನ ಯಾರೇ ಸಖಿ ।
ಕೌಸಲ್ಯನುದರದಿ ಶಿಶುವಾಗಿ ಜನಿಸಿದ ।
ದಶರಥ ರಾಮನ್ನ ನೋಡೇ ಸಖಿ ||೭||
ಬ್ರಹ್ಮಾಂಡದೊಳಗೆಲ್ಲಾ । ಬಂಡಿಯ ಹೊಡೆದನು |
ಪಾರ್ಥಸಾರಥಿ ಯಾರೇ ಸಖಿ ।
ಮಧುರೆಯಲಿ ಪುಟ್ಟಿ ಗೋಕುಲದಲ್ಲಿ ಬೆಳೆದು |
ಗೋಪಾಲ ಕೃಷ್ಣನ್ನ ನೋಡೇ ಸಖಿ ||೮||
ಮರೆಯೊಳಗೆ ನಿಂತು । ಮಾನವ ಕಾಯ್ದಂಥ ।
ಮಾಧವ ನಿವನ್ಯಾರೆ ಪೇಳಿ ಸಖಿ |
ತ್ರಿಮರರ ಸತಿಯರ ವ್ರತ ಪೂರ್ಣ ಮಾಡಿದ ।
ಬೌದ್ಧಾವತಾರನೇ ಚಂದ್ರಮುಖಿ ||೯॥
ಹಯವನೇರಿ ಬಂದು। ಧರಣಿಯೆಲ್ಲಾ ತಿರುಗಿ ।
ಗಿರಿಯಲ್ಲಿ ನಿಂತವನ್ಯಾರೆ ಸಖಿ ।
ವೇದಾಂತ ವೇದ್ಯನ ಶ್ರೀ ಪುರಂದರ ವಿಠ್ಠಲನ್ನ
ಲಕ್ಷ್ಮೀರಮಣನ್ನ ನೋಡೇ ಸಖಿ ||೧೦||
0 ಕಾಮೆಂಟ್‌ಗಳು