belaguru bhajan, kannada bhajan lyrics, sharade daye thoride song lyrics |
|| ಶಾರದಾ ಸ್ತುತಿ ||
ರಾಗ :- ಶಿವರಂಜನಿತಾಳ :- ಆದಿ
|| ಶಾರದೇ ದಯತೋರಿದೇ ನಿನ್ನ |
ಕರುಣೆಯ ಕಡಲಲ್ಲಿಮುತ್ತಾದೆ || ಶಾರದೆ ||
|| ಹಾಲ ಬೆಳಕಿನಲಿ | ಬಿಳಿಯ ಕಮಲದಲಿ |
ಬಿಳಿಯ ವಸ್ತ್ರವನು ಧರಿಸಿ ||
ಬಿಳಿಯ ಕುಸುಮಗಳ | ಮಾಲೆ ಧರಿಸಿರಲು |
ಬೆಳ್ಳಿ ವೀಣೆಯನು ಇರಿಸಿ ||
ನಿನ್ನ ಕಂಗಳಾ ಬೆಳಕನು | ನನ್ನ ಕಂಗಳಲಿ ತುಂಬಿದೆ ||
ಏಳು ಮಗುವೆ ಮೇಲೇಳು ಎಂದು | ಹೊಸ ಬಾಳು ತಂದೆಯಮ್ಮ ||
|| ಶಾರದೆ ||
|| ಅಂಧಕಾರದಲಿ ನೊಂದು ಬಳಲುತಿರೆ | ಬಂದು ಕೈಯ ಹಿಡಿದೆ ||
ಕಂದ ಏಕಳುವೆ | ಮುಂದೆ ದಾರಿಯಿದೆ | ಎಂದು ನೀನೆ ನುಡಿದೆ ||
ತಂದೆ ತಾಯಿಯ ಪುಣ್ಯವೋ |
ನಾ ಇಂದು ಮಾಡಿದ ಪೂಜೆಯೋ ||
ಇಂದು ನಿನ್ನ ಕೃಪೆಯಿಂದ ನಾನು ಆನಂದ ಪಡೆದೆನಮ್ಮ ||
|| ಶಾರದೆ ||
0 ಕಾಮೆಂಟ್‌ಗಳು