ಅಂಗಳದೊಳಗಾಡಬಾರಯ್ಯ ಮುದ್ದು - Angaladolagadabarayya Muddu

|| ಉಡುಪಿ ಶ್ರೀಕೃಷ್ಣ ಸ್ತುತಿ ||



ಅಂಗಳದೊಳಗಾಡಬಾರಯ್ಯ ಮುದ್ದು

ರಂಗ ನಿನ್ನಯ ಮುಖದೋರಯ್ಯ ||ಪ||


ಅರ್ಧರಾತ್ರಿಯಲ್ಲವತರಿಸಿದ್ಯೊ 

ಹೋಗಿ ಮುದ್ದು ಗೋಪಿಯ ಸುತನೆನಿಸಿದ್ಯೊ

ಭದ್ರದೇವಿಯರ ನೀ ಕಳಿಸಿದ್ಯೊ

 ಬಂದಿದ್ದ ಪೂತನಿಯ ಸಂಹರಿಸಿದ್ಯೊ ||೧||


ವತ್ಸಕಾಯುತಲ್ಹೋಗಿ ವನದೊಳು ಬಂದ

ಕಿಚ್ಚು ನುಂಗಿದೆ ನಿನ್ ವದನದೊಳು

ಸ್ವಚ್ಛಮಾಡಿದಿ ಕಾಳಿಜಲಗಳು

ತೋರೆ ಕುಕ್ಷಿಯೊಳಗೆ ತ್ರಿಜಗಂಗಳು ||೨||


ದೇವಕ್ಕಿದೇವಿ ಯಶೋದಾನೆ 

ವಸುದೇವ ನಂದ ಬಲರಾಮಗೆ 

ಎದುರುಬಾರೋ ಭೂದೇವಿರಮಣನೆ

ಭೀಮೇಶ ಕೃಷ್ಣನೆ ಶ್ಯಾಮವರಣನೆ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು