belaguru bhajan lyrics, kannada bhajan lyrics, thirupathi venkata ramana bhajan lyrics |
|| ಹರಿನಾಮ ಸ್ತುತಿ ||
ರಾಗ :- ಗೌಳತಾಳ :- ಆದಿ
ಧಾಟಿ :- ಸ್ವಾಮಿ ಮುಖ್ಯಪ್ರಾಣ
|| ತಿರುಪತಿ ವೆಂಕಟರಮಣ | ನಿನಗೇತಕೆ ಬಾರದೋ ಕರುಣ ||
ನಂಬಿದೆ ನಿನ್ನಯ ಚರಣ | ಪರಿಪಾಲಿಸಬೇಕೋ ಕರುಣ ||
||ಅಳಗಿರಿಯಿಂದ ಬಂದ|ಸ್ವಾಮಿ ಅಂಜನಗಿರಿಯಲಿ ನಿಂದ||
ಕೊಳಲು ದನಿಯು ಚೆಂದ|ನಮ್ಮ ಕುಂಡಲಿರಾಯ ಮುಕುಂದ ||
|| ತಿರುಪತಿ ||
|| ಬೇಟೆಯಾಡುತಾ ಬಂದ | ಸ್ವಾಮಿ ಬೆಟ್ಟದ ಮೇಲೆ ನಿಂದ ||
ಮೀಟುಗಾರ ಗೋವಿಂದ | ಅಲ್ಲಿ ಜೇನು ಸಕ್ಕರೆಯ ತಿಂದಾ ||
|| ತಿರುಪತಿ ||
|| ಮೂಡಲ ಗಿರಿಯಲಿ ನಿಂತ | ಮುದ್ದು ವೆಂಕಟ ಪತಿ ಬಲವಂತ ||
ಈಡಿಲ್ಲವು ಶ್ರೀಕಾಂತ | ಈರೇಳು ಲೋಕಕನಂತ ||
|| ತಿರುಪತಿ ||
||ಅಪ್ಪವು ಅತಿರಸ ಮೆದ್ದ|ಸ್ವಾಮಿ ಅಸುರರ ಕಾಲಲಿ ಒದ್ದ||
ಸತಿಯ ಕೂಡಾಡುತಲಿದ್ದ|ಸ್ವಾಮಿ ಸಕಲ ದುರ್ಜನರ ಗೆದ್ದಾ ||
|| ತಿರುಪತಿ ||
||ಕಾಶಿ ರಾಮೇಶ್ವರದಿಂದ|ಅಲ್ಲಿ|ಕಾಣಿಕೆ ಬರುವುದು ಚೆಂದ ||
ದಾಸರ ಕೂಡೆ ಗೋವಿಂದ|ಅಲ್ಲಿ ದಾರಿನಡೆವುದೆ ಚೆಂದ ||
|| ತಿರುಪತಿ ||
||ಎಲ್ಲಾ ದೇವರ ಗಂಡ|ಅವ ಚಿಲ್ಲರೆ ದೈವದ ಪುಂಡ ||
ಬಲ್ಲಿದವರ ಉದ್ಧಂಡ|ಶಿವಬಿಲ್ಲ ಮುರಿದ ಪ್ರಚಂಡ ||
|| ತಿರುಪತಿ ||
|| ದಾಸರ ಕಂಡರೆ ಪ್ರಾಣ | ತಾ ಧರೆಯೊಳಧಿಕ ಪ್ರವೀಣ ||
ದ್ವೇಷಿಯ ಗಂಟಲ ಗಾಣ | ನಮ್ಮ | ದೈವಗೆ ನಿತ್ಯ ಕಲ್ಯಾಣ ||
|| ತಿರುಪತಿ ||
|| ಮೋಸ ಹೋಗವಲ್ಲಯ್ಯ | ತಾ ಕಾಸಿಗೆ ಒಡ್ಡುವ ಕೈಯಾ ||
ಏಸು ಮಹಿಮೆಗಾರ | ನಮ್ಮ ವಾಸುದೇವ ತಿಮ್ಮಯ್ಯ ||
|| ತಿರುಪತಿ ||
||ಅಲ್ಲಲ್ಲಿ ಜನಗಳ ಕೂಟ|ಮತ್ತಲ್ಲಲ್ಲಿ ಬ್ರಾಹ್ಮಣರೂಟ ||
ಅಲ್ಲಲ್ಲಿ ಪಿಡಿದ ಕೋಲಾಟ|ಮತ್ತಲ್ಲಿಂದ ಊರಿಗೆ ಓಟ ||
|| ತಿರುಪತಿ ||
||ಪಾಪ ವಿನಾಶಿನಿ ಸ್ನಾನ | ಹರಿ ಪಾದೋದಕವೇ ಪಾನ ||
ಕೋಪ ತಾಪಗಳ್ ನಿಧಾನ | ನಮ್ಮ | ಪುರಂದರ ವಿಠಲನ ಧ್ಯಾನ ||
|| ತಿರುಪತಿ ||
0 ಕಾಮೆಂಟ್‌ಗಳು