ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ -- Nee mayeyolago ninnolu mayeyo

Belaguru bhajan -- Nee mayeyolago ninnolu mayeyo song lyrics in kannada,kannada bhajan lyrics, belaguru bhajan lyrics

|| ಹರಿನಾಮ ಕೀರ್ತನೆ ||

ರಾಗ :- ಹಿಂದೋಳ   ತಾಳ :- ಆದಿ


|| ನೀ ಮಾಯೆಯೊಳಗೋ | ನಿನ್ನೊಳು ಮಾಯೆಯೋ ||
ನೀ ದೇಹದೊಳಗೋ | ನಿನ್ನೊಳು ದೇಹವೋ ||
                              || ನೀ ಮಾಯೆಯೊಳಗೋ ||

|| ಬಯಲು ಆಲಯದೊಳಗೋ | ಆಲಯವು ಬಯಲೊಳಗೋ ||
ಬಯಲು ಆಲಯಗಳೆರಡು | ನಯನದೊಳಗೋ ||
ನಯನ ಬುದ್ಧಿಗಳೆರಡು | ನಿನ್ನೊಳಗೋ | ಹರಿಯೇ ||
                               || ನೀ ಮಾಯೆಯೊಳಗೋ ||

|| ಸವಿಯು ಸಕ್ಕರೆಯೊಳಗೋ | ಸಕ್ಕರೆಯು ಸವಯೊಳಗೋ ||
ಸವಿಯು ಸಕ್ಕರೆಯೆರಡು | ಜಿಹ್ವೆಯೊಳಗೋ ||
ಜಿಹ್ವೆ ಮನಸಿನೊಳಗೋ | ಮನಸು ಜಿಹ್ವೆಯೊಳಗೋ ||
ಜಿಹ್ವೆ ಮನಸುಗಳೆರಡು | ನಿನ್ನೊಳಗೋ | ಹರಿಯೇ ||
                                 || ನೀ ಮಾಯೆಯೊಳಗೋ ||

|| ಕುಸುಮದೊಳು ಗಂಧವೋ | ಗಂಧದೊಳು ಕುಸುಮವೋ ||
ಕುಸುಮ ಗಂಧಗಳೆರಡು | ಘ್ರಾಣದೊಳಗೋ ||
ಅಸಮಭವ ಕಾಗಿನೆಲೆ | ಆದಿಕೇಶವರಾಯ ||
ಉಸುರಲೆನ್ನಳವಲ್ಲ | ಎಲ್ಲ ನಿನ್ನೊಳಗೋ ||
                                   || ನೀ ಮಾಯೆಯೊಳಗೋ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು