|| ಗಣಪತಿ ಸ್ತುತಿ ||
ರಾಗ :- ನಾಟ ತಾಳ :- ಮಿಶ್ರಛಾಪು
ರಚನೆ :- ಪುರಂದರದಾಸರು
ಶರಣು ಸಿದ್ಧಿವಿನಾಯಕ ಶರಣು ವಿದ್ಯಾ ಪ್ರದಾಯಕ || ಪ ||
ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಕ ವಾಹನ ||ಶರಣು ಶರಣು || ಅ.ಪ. ||
ನಿಟಿಲ ನೇತ್ರನೆ ದೇವಿಸುತನೇ ನಾಗಭೂಷಣ ಪ್ರಿಯನೇ
ಕಟಿತಟಾಂಕಿತ ಕೋಮಲಾಂಗನೇ ಕರ್ಣಕುಂಡಲಧಾರನೇ ||
|| ಶರಣು ಶರಣು ||
ಬಟ್ಟ ಮುತ್ತಿನ ಹಾರ ಪದಕನೆ ಬಾಹು ಹಸ್ತ ಚತುಷ್ಟನೇ
ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶ ಧಾರನೇ ||
|| ಶರಣು ಶರಣು ||
ಕುಕ್ಷಿ ಮಹಾ ಲಂಬೋದರನೆ ಇಕ್ಷು ಚಾಪನ ಗೆಲಿದನೇ
ಪಕ್ಷಿವಾಹನ ಸಿರಿ ಪುರಂದರ ವಿಠಲನ ನಿಜ ದಾಸನೇ ||
|| ಶರಣು ಶರಣು ||
0 ಕಾಮೆಂಟ್‌ಗಳು