ಕಲಿಯುಗದೊಳು ಹರಿನಾಮವ ನೆನೆದರೆ -- Kaliyugadolu Hari Namava Nenedare


|| ಹರಿನಾಮ ಕೀರ್ತನೆ ||



ರಾಗ :- ಜಂಜೂಟಿ
ತಾಳ :- ಆದಿ

|| ಕಲಿಯುಗದೊಳು ಹರಿ | ನಾಮವ ನೆನೆದರೆ |
ಕುಲ ಕೋಟಿಗಳುದ್ಧರಿಸುವವೋ | ರಂಗಾ ||
ಸುಲಭದ ಭಕುತಿಗೆ | ಸುಲಭವೆಂದೆನಿಸುವ |
ಜಲರುಹನಾಭನ | ನೆನೆ ಮನವೇ | ರಂಗಾ ||
                        || ಕಲಿಯುಗದೊಳು || ಪಲ್ಲವಿ ||

|| ಸ್ನಾನವನರಿಯೆನು | ಮೌನವನರಿಯೆನು |
ಧ್ಯಾನವನರಿಯೆನೆಂದೆನಬೇಡ ||
ಜಾನಕಿ ವಲ್ಲಭ | ದಶರಥ ನಂದನ |
             ಗಾನವಿಲೋಲನ ನೆನೆ ಮನವೇ | ರಂಗಾ    1.       

|| ಅರ್ಚಿಸಲರಿಯೆನು | ಮೆಚ್ಚಿಸಲರಿಯೆನು |
ತುಚ್ಛನು ನಾನೆಂದೆನಬೇಡ ||
ಅಚ್ಯುತಾನಂದ | ಗೋವಿಂದ | ಮುಕುಂದನ |
        ಇಚ್ಛೆಯಿಂದಲಿ ನೀ | ನೆನೆ ಮನವೇ | ರಂಗಾ   2.     

|| ಜಪವ ನಾನರಿಯೆನು | ತಪವ ನಾನರಿಯೆನು ||
ಉಪವಾಸ ವ್ರತಗಳ | ಮೊದಲರಿಯೇ ||
ಅಪಾರ ಮಹಿಮ ಶ್ರೀ | ಪುರಂದರ ವಿಠಲನ |
       ಉಪಾಯದಿಂದಲಿ | ನೆನೆ ಮನವೇ | ರಂಗಾ    3.     


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು