|||| ಗುರು ಭಜನೆ ||
ರಾಗ :- ಮಾಯಾಮಾಳವಗೌಳ
ತಾಳ :- ಆದಿ
ಪ || ಗುಡಿಯ ನೋಡಿರಣ್ಣಾ | ದೇಹದ |
ಗುಡಿಯ ನೋಡಿರಣ್ಣಾ ||
ಗುಡಿಯ ನೋಡಿರಿದು | ಪೊಡವಿಗೆ ಒಡೆಯನು ||
ಅಡಗಿಕೊಂಡು | ಕಡು | ಬೆಡಗಿನೊಳಿರುತಿಹ ||
|| ಗುಡಿಯ ನೋಡಿರಣ್ಣಾ ||
1. || ಮೂರು ಮೂಲೆಯ ಕಲ್ಲು | ಅದರೊಳು |
ಜಾರುತಿರುವ ಕಲ್ಲು ||
ಧೀರ ನಿರ್ಗುಣನು | ಸಾರ ಸಗುಣದಲಿ ||
ತೋರಿ ಅಡಗಿ ತಾ | ಬ್ಯಾರ್ಯಾಗಿರುತಿಹ ||
|| ಗುಡಿಯ ನೋಡಿರಣ್ಣಾ ||
3. || ಸಾಗುತಿಹವು ದಿವಸ | ಬಹುದಿನ |
ಹೋಗಿ ಮಾಡಿವಾಸ ||
ಯೋಗಿರಾಜ ಶಿಶುನಾಳಧೀಶ |
ತಾನಾಗಿ ಪರಾತ್ಪರ ಬ್ರಹ್ಮರೂಪನಿಹ ||
|| ಗುಡಿಯ ನೋಡಿರಣ್ಣಾ ||
0 ಕಾಮೆಂಟ್‌ಗಳು