|| ಗುರು ಭಜನೆ ||
ರಾಗ :- ಮಾಯಾಮಾಳವಗೌಳ
ತಾಳ :- ಆದಿ
ಪ || ಗುರುವಿನ ಗುಲಾಮನಾಗುವ ತನಕ |
ದೊರೆಯದಣ್ಣ ಮುಕುತಿ ||
ಪರಿ ಪರಿ ಶಾಸ್ತ್ರವನೋದಿದರೇನು |
ವ್ಯರ್ಥವಾಯಿತು | ಮುಕುತಿ ||
|| ಆರು ಶಾಸ್ತ್ರವ ನೋದಿದರೇನು |
ನೂರಾರು ಪುರಾಣವ ಮುಗಿಸಿದರೇನು ||
ಸಾರನ್ಯಾಯ ಕಥೆ | ಕೇಳಿದರೇನು |
ಧೀರನಂತೆ ತಾ ತಿರುಗದರೇನು ||
|| ಗುರುವಿನ || 1.
|| ಕೊರಳೊಳು ಮಾಲೆ ಧರಿಸಿದರೇನು |
ಬೆರಳೊಳು ಜಪಮಣಿ ಎಣಿಸಿದರೇನು |
ಮರುಳನಾಗಿ ತಾ ಶರೀರಕೆ ಬೂದಿ |
ಬಳಿದುಕೊಂಡು ತಾ | ತಿರುಗಿದರೇನು ||
|| ಗುರುವಿನ || 2.
|| ನಾರಿಯ ಭೋಗ ಅಳಿಸಿದರಿಲ್ಲಾ |
ಶರೀರಕೆ ಸುಖವ ಬಿಡಿಸಿದರಿಲ್ಲಾ ||
ಮಾರಜನಕ ಶ್ರೀ ಪುರಂದರ ವಿಠಲನ |
ಸೇರಿಸಿಕೊಂಡು ತಾ ಪಡೆಯುವ ತನಕ ||
|| ಗುರುವಿನ || 3.
0 ಕಾಮೆಂಟ್ಗಳು