|| ರಾಮ ಸ್ತುತಿ ||
ರಾಗ : ನಟಭೈರವಿ
ತಾಳ : ಆದಿ
|| ರಾಮನ ಪಾದ ಹಿಡಿದು ಭಜಿಸಿರೋ ||
ಜೈ ಜೈ ರಾಮನ ಪಾದ ಹಿಡಿದು ಭಜಿಸಿರೋ ||
ನೀವು | ಕಾಮಿತ ಫಲಗಳ ಪಡೆಯಿರೋ |
ನೀವು ಕಾಮಿತ ಫಲಗಳ ಪಡೆಯಿರೋ ||
ಜೈ ಜೈ ರಾಮನ ಪಾದ ಹಿಡಿದು ಭಜಿಸಿರೋ || ಪ ||
ಸುಳ್ಳು ಠಕ್ಕು ಚಾಡಿ ಕುಹಕ|ಆಡಿಬೇಡಿರೋ | ನೀವು||
ಒಳ್ಳೇ ನುಡಿಯ|ಮಂತ್ರಧ್ಯಾನ|ಬಿಡಲು ಬೇಡಿರೋ ||
ಜೈ ಜೈ ರಾಮನ || ೧.
ಚೆಲ್ಲಾಪಿಲ್ಲಿ|ಮಾತುಗಳನ್ನು ಅಲ್ಲೇ ಬಿಡಿರೋನೀವು||
ಪುಲ್ಲಾ ನಾಭನ ಭಜನೆಯನ್ನು|ಇಲ್ಲೇ ಮಾಡಿರೋ ||
ಜೈ ಜೈ ರಾಮ || ೨.
ಹೆಣ್ಣು ಹೊನ್ನು ಮಣ್ಣು ಮೂರ|ನಂಬ ಬೇಡಿರೋ|ನೀವು ||
ಎಣ್ಣೆ ಒಳಗೆ ಬಿದ್ದಂತಹ|ಹುಳುವ ಕಾಣಿರೋ ||
ಜೈ ಜೈ ರಾಮ || ೩.
ಅನ್ನದಿಂದ|ಬಂದ ಕಾಮ ನಿನ್ನದೇನಲೋ|ನೀವು ||
ಬಣ್ಣಗೆಟ್ಟು ಬಾಯ್ ಬಾಯ್ ಬಿಡಲು ಬೇಡಿರೋ ||
ಜೈ ಜೈ ರಾಮ || ೪.
ಏಕನಾಥನ ಕರೆದಿ ಪಿಡಿದು|ಝೇಂಕಾರ ಮಾಡಿರೋ|ನೀವು ||
ಏಕಮನದಿ ಕುಳಿತು ರಾಮರ|ಧ್ಯಾನವಮಾಡಿರೋ||
ಜೈ ಜೈ || ೫.
ದಮ್ಮಡಿಯನ್ನು ಹಿಡಿದು ನೀವು|ಝೇಂಕಾರ ಮಾಡಿರೋ|ನೀವು ||
ತಾಳ ಥೈಯ್ಯಾ|ಥೈಯ್ಯಾ|ಎಂದು ತಾಳ ಹಾಕಿರೋ ||
ಜೈ ಜೈ ರಾಮ || ೬.
ಗುರುವಿಗಿಂತ|ಮತ್ತೆ ಬೇರೊಬ್ಬರಿಲ್ಲವೋ ||
ಆತನ ಬಿಟ್ರೆ ನಮಗಿನ್ನು | ತಿಳಿಯಲೊಲ್ಲವೋ ||
ಜೈ ಜೈ ರಾಮ || ೭.
ನನ್ನಿಯಿಂದ|ಭಜಿಪೆವಯ್ಯ|ಎನ್ನ ಗುರುವೆ|ನೀನು ||
ಮನ್ನಿಸುತ್ತ ನಿನ್ನ ಒಳಗೆ ಐಕ್ಯ ಮಾಡಿಕೋ ||
ಜೈ ಜೈ ರಾಮ || ೮.
0 ಕಾಮೆಂಟ್‌ಗಳು