ಪಾವನ ಗುಣ ರಾಮ ಹರೇ _ " Pavana Guna Rama Hare "

 || ಹನುಮ ಸ್ತುತಿ ||

gayitalk.blogspot.com


ರಾಗ : ಶಂಕರಾಭರಣ

ತಾಳ : ಆದಿ


|| ಪಾವನ ಗುಣ ರಾಮ | ಹರೇ | ರಾಮ | ಹರೇ ||

ಪರಮ ದಯಾ ನಿಲಯಾ | ಹರೇ ಪರಮ ದಯಾ ನಿಲಯಾ | ಹರೇ |  

ಪಾವನ ಗುಣ ರಾಮ ||                        || ಪಲ್ಲವಿ ||


1. || ಮಾಯಾ ಮಾನುಷ | ರೂಪ | ಮಾಯಾತೀತ | ಮಂಗಳದಾತ ||

ವೇದಾಂತವದೂ | ಹೃದಯ ವಿಹಾರ ವೇದಮಯಾ ಪರಮಾನಂದ ರೂಪ 

 || ಪಾವನ ಗುಣರಾಮ ||


2. || ಕರುಣಾ | ರಸಭರ ನಯನಾ || ದರಹಾಸ ಮನೋಹರ ವದನಾ ||

ನವ ತುಳಸೀದಳ | ಮಾಲಾಭರಣ || ನಾನಾ ಜೀವನ |ನಾಟಕ ಕಾರಣ ||

                 || ಪಾವನ ಗುಣರಾಮ ||


3. || ಶ್ರೀ ಗುರುವರ ಕರುಣಾ ಸೀಮ | ಎನಗರುಹಿತು | ರಾಮನ ನಾಮ ||

ಶ್ರೀ ಗುರುವರ ||

ರಾಮ ರಹೀಮ | ಕೃಷ್ಣ ಕರೀಮ | ನಾಮರೂಪ ಜಗವೆಲ್ಲವೂ ರಾಮ ||

ಶ್ರೀ ಗುರುವರ ||


4. || ತಂದೆ ತಾಯಿ ಬಂಧು ಬಳಗ | ಸಕಲ ಚರಾಚರ ಎಲ್ಲವು ರಾಮ ||

ಹಿಂದೆ ಮುಂದೆ ಎಂದೆಂದಿಗೂ ಎಲ್ಲಾ | ನಿಂದು ಸಲಹುವನು ರಾಮಾ

|| ಶ್ರೀ ಗುರುವರ ||


5. || ಭಜನಾ ಹರಿಸೇವಾ | ಸುಜನಾ | ಶ್ರೀರಾಮರ ನಿಜ ಗುಣಧಾಮ ||

ಭಜನಾ ಹರಿಸೇವಾ ||

ಸಾಧನಾ | ಸದಾ ರಾಮಧ್ಯಾನ | ಮುಕುತಿ ರೂಪ ಜನಾವದನಾ ||

|| ರಾಮ ಪಾಲಯ ಕೋದಂಡರಾಮ | ಪುಣ್ಯನಾಮ |

ಭೂಮಿಜಾಪತೆ | ಆನಂದಸೀಮ | ಗತಿಮತಿ ನೀನೇ ರಾಮಾ ||

ಭಜನಾ ಹರಿಸೇವಾ ||


6. ||  ಭಜಮನ ಭಜಿರೇ ಶ್ರೀರಾಮ |

ಭಜಮನ ಭಜಿರೇ ಸೀತಾರಾಮ || ಭಜಮನ ||

ಮೋಹನರಾಮ | ಮಂಗಳಧಾಮ || ಮಾಯಾತಿಮಿರ ವಿರಾಮ ||

ಆತ್ಮಾರಾಮ | ಆನಂದರಾಮ | ಅಗಣಿತ ಗುಣಗಳ ತಾರಕನಾಮ ||


|| ಜೈ ರಾಂ | ಸೀತಾರಾಂ || ಜೈ ರಾಂ | ಸೀತಾರಾಂ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು