ನಿಂದಿಸುವರು ನಮ್ಮ ಬಂಧು ಕುಲ - Tatva Pada - Nindisuvaru Namma Bandhu Kula

 || ತತ್ವ ಪದ ॥ 

kannadabhajanlyrics.com
 kannada Bhajan lyrics.com 


ರಾಗ : ಚಾಂದ್‌

 ತಾಳ : ಛಾಪು 

॥ ನಿಂದಿಸುವರು ನಮ್ಮ ಬಂಧುಕುಲ | ನರಹಂದಿಗಳೊಡ ನಮಗೇನು ಛಲ॥

ತನ್ನತಾ ತಿಳಿಯದೆ । ಪರರಿಗೆ । ಮಂದಿಯೊಡನೆ । ನಮಗೇನು ಫಲ ॥ 



೧ ॥ ಎಲ್ಲೆಲ್ಲಿಯು । ಎಡೆಯಿಲ್ಲದ ಮೂರ್ತಿಗೆ । ಕಲ್ಲಿನ ಮನೆಯಿಂದೇನು ಫಲ ॥

ಸಲ್ಲಲಿ ತಾನೊಂದೊಲ್ಲಿಸಿದಾತ್ಮಗೆ । ಬೆಲ್ಲವ ತೋರಿದೊಡೇನು ಫಲ । ನಿಂದಿಸುವರು ॥ 


೨ ॥ ಮಾರ ಜನಕನಾಕಾರವ ಕಾಣದೆ । ಆರತಿ ಬೆಳಗಿ ದೊಡೇನು ಫಲ॥

ಮೂರುಗುಣಂಗಳ ಮೀರಿದ ಶಿವನೊಳು । ಸೇರದ ಸುಖದಿಂದೇನು ಫಲ ॥ ನಿಂದಿಸುವರು ॥ 


೩ ॥ ಪರಮಪುರುಷ ತನ್ನ । ಕರಣದಿ ನೆಲೆಸಿರೆ । ಧರೆಯನು ತಿರುಗಿದೊಡೇನು ಫಲ ॥

ಮರಣವು ಬಂದಿಹ | ಪರಿಯನವು ತಿಳಿಯದೇ । ಶರಣನು ಎಂದೊಡೆ ಏನು ಫಲ ॥ ನಿಂದಿಸುವರು ॥ 


4.॥ ದೇವರು ಬೆಳಗುವ । ಭಾವವ ತಿಳಿಯದೆ । ಬಾವಿಗೆ ತಿರುಗಿದೊಡೇನು ಫಲ ||

ಜೀವನು ಎಂಬುವ । ಭಾವವು ಹೋಗದೆ । ಕೋವಿದನಾದೊಡೆ । ಏನು ಫಲ ॥ ನಿಂದಿಸುವರು ||


5.॥ ಹೊರವಳಗೆಂಬುದ । ಧರಿಸಿದ ಮಾಯೆಯ | ಅರಿಯಂ ಮಂದಿಯಿಂದೇನು ಫಲ ||

ವರಗುರು ಶಂಕರನಡಿಯೊಳು ಬೆರೆಯದೆ | ನರದೇಹವು ಇದ್ದೇನು ಫಲ।॥ 


ನಿಂದಿಸುವರು ನಮ್ಮ ಬಂಧುಕುಲ | ನರ |

ಹಂದಿಗಳೊಡ ನಮಗೇನು ಛಲ॥

ತನ್ನ ತಾ ತಿಳಿಯದೇ | ಪರರಿಗೆ । ಮಂದಿಯೊಡನೆ।

ನಮಗೇನು ಫಲ ॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು