|| ತತ್ವಪದ ॥
ರಾಗ : ಆನಂದ ಭೈರವಿ
ತಾಳ:ಛಾಪು
|| ಭಜನೆ ಬ್ರಹ್ಮಾನಂದ ರಸವೋ । ಸೋಹಂ ।
ಭಜನೆ ಬ್ರಹ್ಮಾನಂದ | ಆನಂದರಸವೋ ॥
ಕಜನಿಚೇತೋ ರಜನಿಹರಣ ।
ಸುಜನ ಹೃದಯಾಂಗಣ ಪರಾಯಣ।|
ಅಜಸುರೇಂದ್ರ ಮುನೀಂದ್ರ ಸೇವ್ಯನ ।
ಭುಜಗಭೂಷಣ । ಭವ್ಯ ಶಿವನಾ।| ಭಜನೆ ॥ '
॥ ಮೂರೈದು ಗೇಣಿನ ಗುಡಿಯಾ ।
ಹದಿನಾರು ಸ್ತಂಭವು ಸಪ್ತ| ಪ್ರಾಕಾರದೊಳವೋ ॥
ದ್ವಾರ ಒಂಭತೈದು ಕಲಶಗಳಾರು ಮೆಟ್ಟುಗಳ್ಳೆದು ವರ್ಣದ|
ತೋರಣಂಗಳು ಕಾದು ಇರುತಿಹ |
ದ್ವಾರಪಾಲಕರೀರ್ವರೊಪ್ಪುವ||ಭಜನೆ ॥
| ನವರತ್ನ ಖಚಿತ । ಮಂಟಪದ | ದ್ವಾರ ಜವದಿ
ಷಡಂಗುಳಿಯಿಂದಾಲಿ ತೆರಿಯೆ ॥
ಪ್ರಮಲನಾತ್ಮೇಶ್ವರನು ತೋರುವ ।
ತವಕದಿಂದ್ರಿಯ । ಕರಣವೆಂಬುವ ||
ವಿವಿಧ ಪುರಜನರೆಲ್ಲ ಬ೦ದು ।
ಶಿವನ ಸೇವೆಯಲಿಹರುನಿಂದು || ಭಜನೆ ॥
। ಪರಬ್ರಹ್ಮ! ದ೦ಡಿ ವೀಣೆಯನು ಮಾಡಿ ।
ಮೆರೆವೇಳು ಚಕ್ರಗಳ್ । ಮೆಟ್ಲುಗಳ್ಮಾಡಿ ||
ಇರಿಸಿ ಪ್ರಾಣಗಳೆಂಬ ತಂತಿಯ ।
ತಿರುವಿ ವಿಷಯಗಳೆಂಬ ಬಿರಿಡೆಯ॥
ಸ್ಮರಣೆಯಂಬಂಗುಳಿಯ ಮೀಟುತ ।
ವರಸರಸ್ವತಿಯಂತೆ ಪಾಡುತ ॥ ಭಜನೆ ॥
॥ ಮೂರು ಮೂರ್ತಿಯ ಸಭೆಯಲ್ಲಿ ।
ಚಂದ್ರ । ತಾರೆಯ ಬೆಳಕಿನೊಳಾನಂದದಲ್ಲಿ ||
ಸಾರಸಂಗೀತಗಳು । ಧಣ ಧಣ ।
ಭೇರಿ ಘಂಟೆಯ ತಾಳ ಝಣ ಝಣ॥
ಚಾರುಘೋಷಕೆ ಬೆದರಿ ಪಾತಕ ।
ಊರು ಬಿಟ್ಟೊಡುವುದು ಆ ಕ್ಷಣ ॥ ಭಜನೆ ॥
॥ ಶ್ರೀಗುರುಮಹಲಿಂಗ ರಂಗನಾ ।
ಕೃಪೆಯಾಗಲು ಭಕ್ತರ ಭವನಾಶನಾ ||
ಭೋಗ ಸುಖವಂ ಭಯದಿ ಜಲದೊಳು ।
ಕಾಗೆಯಂದದಿ ಮುಳುಗಲೊಲ್ಲದೆ ॥
ಯೋಗ ನಿದ್ರೆಯೊಳ್ ಮುಳುಗಿ ।
ಉರಗಭವ ರೋಗವಳಿದಿಹ । ಬ್ರಹ್ಮ ನಿಷ್ಠರ ॥
॥ ಭಜನೆ ಬ್ರಹ್ಮಾನಂದ ರಸವೋ ||
0 ಕಾಮೆಂಟ್ಗಳು