|| ದೇವಿ ಹಾಡು ||
ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು ||ಪ ||
ತಾಯಿ ಹೃದಯ ತಂದಾ ತುಂಬು ಮಮತೆ ಇಂದಾ
ಬಾ ಇಲ್ಲಿ ಓ ಕಂದ ಎನುತಿಹಳು
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು ॥ ನೋಡು |
ಮೈಸೂರು ನಗರದ ಬೆಟ್ಟದ ಮೇಲೆ
ಮಹಿಷಾಸುರ ಮರ್ಧಿನಿಯ ವೈಭವ ಲೀಲೆ
ಧನುಜ ಸಂಹಾರಿಣೀ ತ್ರಿಭವನ ಪೋಷಿಣಿ
ಶಂಕರನ ರಾಣಿಗೀವ ಹೂಗೆಳ ಮಾಲೆ ॥ ನೋಡು ॥
ನಂಬಿರುವ ಭಕ್ತರ ರಕ್ಷೆಗಾಗಿ ನಂಬದಿಹ ದುಷ್ಟರ ಶಿಕ್ಷೆಗಾಗಿ
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ
ಕರುನಾಡ ಮಕ್ಕಳ ಹಿರಿ ದೈವವಾಗಿ || ನೋಡು ||
ಉಕ್ಕಿ ಬಹ ನದಿಯಲ್ಲಿ ಅವಳ ನಗೆ
ಬೀಸಿ ಬಹ ಗಾಳಿಯಲಿ ಅವಳುಸಿರು
ಹಸಿ ಹಸಿರು ಪೈರುಗಳೇ ಅವಳುಡುಗೆ
ಆ ತಾಯಿ ರೂಪವೋ ಹಲವು ಬಗೆ ॥ ನೋಡು ||
0 ಕಾಮೆಂಟ್‌ಗಳು