ಗುರು ಸ್ತುತಿ - ಜಯದೇವ ಜಯದೇವ ಜಯ ಸದ್ಗುರುವರಗೇ, Jayadeva Jayadeva Jaya Sadguruvarage

|| ಗುರು ಸ್ತುತಿ ||

kannadabhajanlyrics.blogspot.com
kannadabhajanlyrics.blogspot.com



ಜಯದೇವ ಜಯದೇವ ಜಯ ಸದ್ಗುರುವರಗೇ

ಜಯ ಜಯ ನಿತ್ಯ ನಿರಂಜನ

ನಿರುತಾನಂದನಿಗೇ ಜಯದೇವ ಜಯದೇವ 


॥ ಮೂರು ಗುಣಗಳ ಕಾರ್ಯದಿ ಸೇರದಿರುವವಗೆ 

ತೋರುವ ಈ ವಿಶ್ವಕೆ ಆಧಾರವೆನಿಸಿಹಗೆ

ಧೀರನಾಗಿಹ ಚಿತ್ಸುಖ ಸಾರರೂಪನಿಗೆ

ನಾರೀನರ ಭೇದಗಳ್ಳತಿ ತೋರದ ಪ್ರಭುವರಗೆ ||೧॥ 


ಗಣನೆಗೊಗದಿಹನಗಣಿತ ಘನಚಿದ್ರೂಪನಿಗೆ

ದಿನಮಣಿಶಶಿವಹ್ನಿಗಳನು ಅನುದಿನ ಬೆಳಗಿಪಗೆ 

ಜನಿಮೃತಿ ಇರದಿಹನದ್ವಯ ಚಿನುಮಯನೆನಿಸಿಹಗೆ

ಮುನಿಜನಹೃದಯವಿಹಾರಿಗೆ ಘನಗುರುಮೂರುತಿಗೆ||೨||


ರಜತಮಸಾತ್ವಿಕವಿರಹಿತ ಅಜನೆನಿಸಿರುವವಗೆ

ನಿಜಜೀವೇಶರಿಗಾಶ್ರಯ ತ್ರಿ ಜಗಮ್ಯಪಕಗೆ 

ಅಜಹರಿಹರ ಜಗವಂದಿತ ಭಜಕರ ಸಲಹುವಗೆ 

ಸುಜನರ ನಿಜ ಮೃದು ಹೃದಯದಿ

ವಿಜಯದಿ ನಲಿಯುವಗೆ ||೩||


ಸಾಧನೆಯಿಂ ಪರಿಪಕ್ವದ ಸಾಧಕ ಜನಮನ

 ಮೋದದಿ ತನ್ನಯ ತತ್ವದ ಬೋಧವನರುಹಲಿಕೆ 

ಆದಿಮೂರುತಿ ಶ್ರೀ ಪ್ರಭು ತಾ ದಯಗೊಳ್ಳುತಲಿ 

ಮೇದಿನಿಯೊಳಗವತರಿಸಿಹ ಶ್ರೀಧರ ನಾಮದಲಿ||೪||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು