ಒಂದು ಬಾರಿ ಶಿರದ ಮೇಲೆ - Ondu Bari Shirada Mele

|| ಗಣಪತಿ ಸ್ತುತಿ ||





 ಒಂದು ಬಾರಿ ಶಿರದ ಮೇಲೆ ಇರಿಸು ತಾಯೆ ಚರಣ

ದಯೆಯ ತೋರಿ ಮುದವ ನೀಡು ಮೂಲಾಧಾರಿ

ಲಂಬೋದರ ಗಜಾನನ ಅಂಬಾಪುತ್ರ ಶುಭಾನನ||ಪ||


ಎಂಥಾ ಪುಣ್ಯ ನಿನ್ನದಯ್ಯ ಶಿವ ಶಕ್ತಿ ತನಯನೆ

ತಾಯಪಾದ ಹೊತ್ತು ಶಿರದಿ ಭೂಮಿಗಿಳಿದ ಧೀರನೆ

ಲಂಬೋದರ ಗಜಾನನ ಅಂಬಾ ಪುತ್ರ ಶುಭಾನನ||೧||


ಮಾತಾಪಿತರ ಮೂರು ಬಾರಿ ಸುತ್ತಿ ಬಂದ ಗಣಪನೆ

ಮುಗಿಸಿಬಿಟ್ಟೆ ಕ್ಷಣದಲ್ಲಿ ಅಖಂಡಯಾತ್ರೆ ಪ್ರದಕ್ಷಿಣೆ

ಲಂಬೋದರ ಗಜಾನನ ಅಂಬಾಪುತ್ರ ಶುಭಾನನII೨II





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು