ರಂಗ ಕುಣಿದ ಮುದ್ದು ರಂಗ ಕುಣಿದ - Ranga Kunida Muddu

|| ಶ್ರೀ ಕೃಷ್ಣ ಸ್ತುತಿ ||





ರಂಗ ಕುಣಿದ ಮುದ್ದು ರಂಗ ಕುಣಿದ

ರಂಗ ಕುಣಿದ ಮುದ್ದು ರಂಗ ಕುಣಿದ ||ಪ||


ರಂಗ ಕುಣಿದ ಗೋಪಿಕಂಗಳ ಮುಂದೆ

ಪೊಂಗೆಜ್ಜೆರವದೊಳು ಅಂಗಳದೊಳು ||೧||


ಗೆಳೆಯರೆಂದೆನಿಸುವ ಎಳೆಮಕ್ಕಳೊಗೂಡಿ

ಬಳುಕುತ ಬಾಗುತ ನಲಿನಲಿದಾಡಿ ||೨||


ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿ

ಕಳಕಲಿಸೀ ನಕ್ಕು ನಗುತ ಬಿದ್ದಿದ್ದು ||೩||


ಅರಳೆಲೆ ಮಾಗಾಯಿ ಬೆರಳ ಹೊನ್ನುಂಗುರ

ಕಿರುಗೆಜ್ಜೆ ಬಾರೆಂದು ತರಳರಿಗಿತ್ತು ||೪||


ನಗುತಲೆ ಮುದ್ದಿಸಿ ಬಿಗಿದಪ್ಪಲೆಶೋದೆ.....

ಯಶೋದೆ ಬಿಗಿದಪ್ಪಲು ನಗುತಲೆ ಮುದ್ದಿಸಿ

ಬಿಗಿದಪ್ಪಲೆಶೋದೆ ಮಗ

ಪ್ರಸನ್ವೆಂಕಟೇಶ ಚಿಗಿದುಡಿಯಲ್ಲಿ ||೫||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು