|| ವೆಂಕಟರಮಣ ಸ್ತುತಿ ||
ಪಂಕಜನಾಭ ಪರಮ ಪವಿತ್ರ
ಶಂಕರ ಮಿತ್ರನೇ ಬಾರೋ ||ಅ.ಪ||
ಮುದ್ದು ಮುಖದ ಮಗುವೆ ನಿನಗೆ
ಮುತ್ತು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು
ಪೊಂದಿದ್ದೇನು ಬಾರೋ ||೧||
ಮಂದರ ಗಿರಿಯನೆತ್ತಿದ ಆನಂದ
ಮೂರ್ತಿಯೇ ಬಾರೋ
ನಂದನ ಕಂದ ಗೋವಿಂದ ಮುಕುಂದ
ಇಂದಿರೆಯರಸನೆ ಬಾರೋ ||೨||
ಕಾಮನಯ್ಯ ಕರುಣಾಳು
ಶ್ಯಾಮಲ ವರ್ಣನೆ ಬಾರೋ
ಕೋಮಾಳಾಂಗ ಶ್ರೀಪುರಂದರ ವಿಠಲನೆ
ಸ್ವಾಮಿರಾಯನೆ ಬಾರೋ ||೩||
0 ಕಾಮೆಂಟ್‌ಗಳು