ವಿನಾಯಕ ವಿಘ್ನ ವಿನಾಶಕ - Vinayaka Vighna Vinashaka

 || ಗಣಪತಿ ಸ್ತುತಿ ||


ರಾಗ : ಆರಭಿ

ಆದಿತಾಳ





ವಿನಾಯಕ ವಿಘ್ನ ವಿನಾಶಕ

ಶಿವಸುತ ಜನಹಿತ ಅರ್ಚಿಪೆನನವರತ ||


ಅಣಿಮಾಧ್ಯಸ್ಥ ಸಿದ್ಧಿ ಪ್ರದಾಯಕ

ಗಾನರಸಾಧಿಪ ಗಣ ನಾಯಕ ||


ಶೃತಿ ಶಾರೀರಗಳು ಸಂಧಿಪ ಸಿದ್ಧಿಯ ನೀಡೋ

ಶ್ರೀ ವರ ಸಿದ್ಧಿ ವಿನಾಯಕ |

ಪದ್ಮನಾಭ ದಾಸಗೆ ಪರಮ ಪವಿತ್ರನಾದ

ಪ್ರಣವ ಸ್ವರೂಪ ಲಂಬೋದರ ||೧||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು