ಅಡಿಗಳಿಗೊಂದಿಪೆ ಪುರಂದರ ಗುರುವೆ - Adigaligondipe Purandara Guruve

 || ಶ್ರೀ ಪುರಂದರದಾಸರ ಸ್ತುತಿ ||

 ರಾಗ : ಭೈರವಿ

ತಾಳ : ಅಟ್ಟ ತಾಳ




ಅಡಿಗಳಿಗೊಂದಿಪೆ ಪುರಂದರ ಗುರುವೆ ||ಪ||

ಕಡುಜ್ಞಾನಭಕ್ತಿ ವೈರಾಗ್ಯದ ನಿಧಿಯೇ | ಅ.ಪ||


ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರಮನಾದೆ |

ಗುರು ವ್ಯಾಸರಾಯರಿಂದುಪದೇಶಗೊಂಡೆ ||

ಎರಡೆರಡು ಲಕ್ಷದಪ್ಪತ್ತೈದು ಸಾವಿರ |

ವರ ನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ||೧||


ಗಂಗಾದಿ ಸಕಲ ತೀರ್ಥಂಗಳ ಚರಿಸಿ ತು- |

ರಂಗವದನ ವೇದವ್ಯಾಸರ ||

ಹಿಂಗದೆ ಮನದಲ್ಲಿ ನೆನೆದು ನೆನೆದು ಸುಖಿಸುವ

ಮಂಗಳ ಮಹಿಮೆಯ ತುತಿಸಿ ನಾ ||2||


ನಿನ್ನತಿಶಯ ಗುಣ ವರ್ಣಿಸಲಳವಲ್ಲ |

ನಿನ್ನ ಸೇವಕರ ಸೇವಕನೆಂದು |

ಪನ್ನಂಗಶಯನ ಮುಕುಂದ ಕರುಣ ಪ್ರ- |

ಸನ್ನ ವಿಜಯ ವಿಠಲನ್ನ ಸಂಪನ್ನ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು