|| ಶಿವಸ್ತುತಿ ||
ರಾಗ : ಕಾಂಬೋಧಿ
ತಾಳ : ಝಂಪೆತಾಳ
ಪಂಪಾಪುರ ನಿವಾಸ ಪ್ರಮಥರೇಶ ||ಪಲ್ಲವಿ||
ತ್ವಂಪಾಹಿ ಪಾಹಿ ತ್ರಿಪುರಾರಿ ತ್ರಿನೇತ್ರ ||ಅ.ಪ||
ಕೈಲಾಸ ಸದ್ಮಚಿತ ಚೈಲಭೂಷಣ ಮನೋ |
ಮೈಲಿಗೆಯ ಪರಿಹರಿಸೋ ನೀಲಕಂಠ |
ಕಾಲಕಾಲಗಳಲ್ಲಿ ಕಾಲನಿಯಾಮಕನ |
ಲೀಲೆಗಳ ತುತಿಪ ಸುಖ ನಾಲಿಗೆಗೆ ಕೊಡು ಸತತ||೧||
ಪಾರ್ವತೀರಮಣ ನೀ ಮೋಹ ಶಾಸ್ತ್ರವ ರಚಿಸಿ|
ಶಾರ್ವರೀಚರರ ಮೋಹಿಸಿದೆ ಹಿಂದೆ
ದೂರ್ವಾಸಶುಕ ವ್ಯಾಧ ಜೈಗೀಶ ರೂಪದಲಿ ||
ಈರ್ವರರಿಯ ಪರಿಲಿ ಹರಿಯ ಮೆಚ್ಚಿಸಿದೆ||೨||
ಸುರನದೀ ಧರ ನಿನ್ನ ಚರಿತೆಗಳ ವರ್ಣಿಸಲು |
ಸುರಪ್ರಮುಖ ಸುಮನ ಸಾಧ್ಯರಿಗಸದಳಾ||
ಸ್ಮರನ ಪಿತ ಶ್ರೀಜಗನ್ನಾಥವಿಟ್ಠಲನ ಸಂ |
ಸ್ಮರಣೆಯನೆ ಕೊಟ್ಟು ಉದ್ಧರಿಸೊ ದಯದಿಂದ||೩||
0 ಕಾಮೆಂಟ್ಗಳು