|| ಗಣಪತಿಗೆ ಆರತಿ ಹಾಡು ||
ಮುತ್ತಿನಾರತಿ ಪಚ್ಚೆಯಾರತಿ ರತ್ನದಾರತಿ ಬೆಳಗು ಬಾ
ಗೌರಿ ತನಯಗೆ ಗಣನಾಥನಿಗೆ
ವರಗಳ ಪಾಲಿಪ ಕರುಣಾಕರಗೆ ||ಪ||
ಪಾಶಾಂಕುಶಧರ ಪಂಚಾನನಗೆ
ಪರಮ ಪರಾತ್ಪರ ಲಿಂಗಾಕ್ಷಕಗೆ
ರನ್ನದಾರತಿ ಹೊನ್ನಿನಾರತಿ ಬಣ್ಣದಾರತಿ ಬೆಳಗು ಬಾ||೧||
ಜ್ಞಾನ ಸ್ವರೂಪ ಬಾಲ ಚಂದಿರಗೆ
ದಿನರ ಪೊರೆವ ಧೂಮ್ರ ವರ್ಣನಿಗೆ
ರನ್ನದಾರತಿ ಹೊನ್ನಿನಾರತಿ ಬಣ್ಣದಾರತಿ ಬೆಳಗು ಬಾ||೨||
ನಾದಪ್ರಿಯಗೆ ಲಂಬೋದರಗೆ
ವಿಜ್ಞಾನ ಕಳೆಯುವ ವಿಘ್ನರಾಜಗೆ
ರನ್ನದಾರತಿ ಹೊನ್ನಿನಾರತಿ ಬಣ್ಣದಾರತಿ ಬೆಳಗು ಬಾ||೩||
ಗೌರಿ ತನಯಗೆ ಗಣನಾಥನಿಗೆ
ವರಗಳ ಪಾಲಿಪ ಕರುಣಾಕರಗೆ
ಮುತ್ತಿನರತಿ ಪಚ್ಚೆಯಾರತಿ ರತ್ನದಾರತಿ ಬೆಳಗು ಬಾ||೪||
0 ಕಾಮೆಂಟ್ಗಳು