||ಕೊಲ್ಹಾಪುರ ಮಹಾಲಕ್ಷ್ಮಿ ಸ್ತುತಿ||
ಕಮಲಾಲಯೇ ಕೊಲ್ಹಾಪುರ ನಿಲಯೇ
ಶ್ರೀ ಮಹಾಲಕ್ಷ್ಮೀ ದೇವಿಯೇ ॥ಪ||
ನಮಿಪೆ ನಿನ್ನ ಪಾದ ಕಮಲಕೆ ಅನುದಿನ
ಕಮಲನಾಭನ್ನ ತೋರಿಸಮ್ಮ॥ ಅ.ಪ ||
ಕಮಲ ಗಂಧಿಯೇ ಕೋಮಲಾಂಗಿಯೇ
ಬ್ರಹ್ಮಾದಿಗಳಿಂದ ವಂದಿತೆ ನಿತ್ಯಮುಕ್ತೇ
ಸುಮನಾಂತ ಹರಿಯ ಅನಂತ ಗುಣಂಗಳ
ನೇಮದಿಂ ನೆನೆವ ಸದಾನಂದ ವದನಳೆ ॥೧||
ಅಂದುಗೆಯಾದಿ ಅಲಂಕಾರ ಚಂದಳೆ
ಮಂದಸ್ಮಿತೇ ಮಹಾಮಂದಿರೆ ಇಂದಿರೆ
ವಂದಿಪ ಭಕುತಾರಾನಂದ ದಾತೇ
ಮಹಾಂನಂದ ಪ್ರಸನ್ನ ವೆಂಕಟನ ರಾಣಿಯೆ ॥೨||

0 ಕಾಮೆಂಟ್‌ಗಳು