ನಂದಕಿಶೋರ ನವನೀತಚೋರ - Nanda Kishora Navaneetha Chora

|| ಗೋವಿಂದ ಸ್ತುತಿ ||




ನಂದಕಿಶೋರ ನವನೀತಚೋರ

ಉಡುಪಿನಾಥ ಶ್ರೀ ಹರಿ ||ನಂದ||

ಶ್ಯಾಮಲಕೋಮಲ ಕ್ರಷ್ಣ ಮುರಾರಿ

ಮೋಹನ ಮುರಳಿದಾರಿ ||ನಂದ||




ನಗೆ ಬೆಳದಿಂಗಳ ಚೆಲ್ಲುತನಿಂದಾ

ಭಕುತರ ಕಾಯುವ ಗೋವಿಂದ ||ನಗೆ||

ನಲಿಯುವ ಗೋಪಿಯರೆಲ್ಲರ ಕೂಡಿ

ಆಡುತ ನೀಡುವ ಆನಂದ

ಹಸುಕರು ಕೂಗಲು ತವಕದಿ ಓಡುವ

ಹಸುಳೆಯ ತೆರದಿ ಮುಕುಂದಾ ||ನಂದ||




ಕಂಸನ ಕಂಡು ಕಿಡಿ ಕಿಡಿಗೊಂಡು

ಧ್ವಂಸವ ಮಾಡಿದ ಅಸುರಾರಿ  ||ಕಂಸನ|| 

ಕನಕನ ಕಂಡು ಬಲು ಮೊದಗೊಂಡು||2||

ಕಿಂಡಿಯಲಿ ಇಣುಕಿದ ದಯೆತೋರಿ

ಕನ್ನಡನೆಲದಲಿ ನೆಲೆಸಿದ ನಮ್ಮ

ಕರುಣಾಸಾಗರ ಶ್ರೀ ಹರೀ... ||ನಂದ|| 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು