ಹರೇ ಶ್ರೀನಿವಾಸ
ಏಳು ಬೆಟ್ಟದ ಮೇಲೆ ಏನಿಹುದೇನಿಹುದೋ - 2
ತಿರುಮಲ ರಾಯನ ದೇಗುಲವಿಹುದೋ - 2
ಅಲ್ಲಿ ವೆಂಕಟರಮಣನು ಎಂತವನೆಂತವನೋ - 2
ಶರಣರ ಕಾಯುವ ಕರುಣಾ ಸಾಗರನೋ ||ಪ ||
ಗೋವಿಂದಾ ಗೋವಿಂದಾ|ಗೋವಿಂದಾ ಗೋವಿಂದಾ
ಗೋವಿಂದಾ ಗೋವಿಂದಾ|ಗೋವಿಂದಾ ಗೋವಿಂದಾ
ಸ್ವಾಮಿ ಪುಷ್ಕರಣಿಯ ಸ್ನಾನಗಳಿಂದಾ
ವರಹಾ ಮೂರ್ತಿಯ ಕಂಡಾನಂದ
ತಿರುಮಲ ರಾಯನ ದರುಶನದಿಂದ - 2
ಗುರುತರ ಕಲ್ಮಶವ ಗೋವಿಂದಾ...... ||೧||
ಶಿರದಿ ಮುಕುಟವು ಧರಿಸಿದ ಚೆಂದ
ಮುಖದಿ ಕಸ್ತೂರಿ ತಿಲಕ ಶ್ರೀಗಂಧ
ಕರದಿ ಒಪ್ಪುವ ಶಂಖ ಚಕ್ರಗಳಿಂದ -2
ಭಕ್ತರ ದುರಿತಗಳು ಗೋವಿಂದಾ......||೨||
ಬಂಗಾರದ ಗೋಪುರವು ಹೊಳೆಯುತ್ತಿರಲು
ಶೃಂಗಾರವಾಗಿಹ ಹರಿಯು ನಿಂತಿರಲು
ಪಾಪ ವಿನಾಶಿನಿಯ ಸ್ನಾನ ಮಾಡುತ್ತಿರಲು - 2
ಪಾಪಗಳೆಲ್ಲವು ಗೋವಿಂದಾ......||೩||
ಅಪ್ಪವು ಅತಿರಸವು ಮುಂದೆ ಪಕ್ವಾನ್ನವು
ತಪ್ಪದೆ ಸಿಗುವುದು ಬುತ್ತಿ ಚಿತ್ರಾನ್ನವು
ವೇದವೇದ್ಯನು ವೆಂಕಟರಮಣನು - 2
ಸಂಕಟ ಹರಿಸುವನು ಗೋವಿಂದಾ.....||೪||
ಮಂದಹಾಸದಿ ಮುದದಿ ಮುಕುಂದಾ
ವರದ ಹಸ್ತವು ಕೊಡುತಲಿ ನಿಂದಾ
ಇಂದಿರೇಶನ ಭಜಿಪ ಭಕ್ತ ವೃಂದ - 2
ಬಂದ ದುರಿತಗಳು ಗೋವಿಂದಾ ..... ||೫||
0 ಕಾಮೆಂಟ್ಗಳು