|| ಗುರುಸ್ತುತಿ ||
ಸಿರಿಬರಗಳು ಪೋಗಿ | ಗುರುವಿನ |
ಕರುಣವೇ ಹಿತವಾಗಿ |
ಕರಣದೊಳಿರುವಾವರಣಕೆ ಸಿಲುಕದೆ |
ಒಳಹೊರಗೊಂದಾಗಿ ||
ಭ್ರಾಂತಿಯ ಜಗವಳಿದೂ |
ಈ ಮಲಯಂತ್ರವ ಕಳೆದುಳಿದು |
ಕಾಂತಾ ಕನಕದ ಚಿಂತೆಯ
ಕಳೆದುಪಶಾಂತಿಯ ಗುಣ ಬಲಿದೂ ||
ಕುರುಡರ ನಡೆ ಬಿಟ್ಟು | ದೃಷ್ಟಿಯ |
ಪರಮಾರ್ಥದೊಳಿಟ್ಟು |
ಕರಣವ ಬೆಳಗಿಪ | ಗುರು ಶಂಕರನಿಗೆ |
ಪೆರೆತೆಂಬುದ ಸುಟ್ಟು ||
0 ಕಾಮೆಂಟ್ಗಳು