ಗುರು ಚರಣವ ಪಿಡಿ, ನಿರತ ನಿರತ - Guru Charanava Pidi Niratha Niratha

|| ಗುರುಪಾದ ಸ್ತುತಿ ||





ಗುರು ಚರಣವ ಪಿಡಿ, ನಿರತ ನಿರತ

ಗುರುವೆ ಪೊರೆಯುವನು, ಸತತ ಸತತ ||ಪ||



ಹರಿ ಮುನಿದರೆ ಗುರು ಪೊರೆಯ-ಬಲ್ಲನು

ಗುರು ಮುನಿದರೆ ಪರಿವಾರ ಯಾರು-ಇವರು

ಗುರುವೇ ಪರತ್-ಪರ, ಗುರುವೇ ಸಂಕಟ-ಹರ

ಗುರುವೇ ಹರಿ ಹರ ಬ್ರಹ್ಮ ಸ್ವರೂಪಿಣಿ ||೧||


ಅಜ್ಞಾನ ಹೊಗಲಾಡಿಸುವವ ನಿಜ ಗುರು

ಜ್ಞಾನ ದೀಪ್ತಿಯ ಕರುಣಿಸುವವ ಗುರು

ಧ್ಯಾನ ಮೌನ-ಗಳ ಸಾಧಿಸುವ ಗುರು

ಜಾನಕಿ ನಾಥನ ತೋರುವವನೇ ಗುರು ||೨||


ಆಶಾ, ಪಾಶ-ಗಳ ತರಿದವ ನಿಜ ಗುರು

ದೋಷ ದೂರ ಮಹಿಮಾನ್ವಿತ ನಿಜ ಗುರು

ಕೇಶವದಾಸ-ನೂತನ ಪ್ರಕಾಶವ

ಶಿಷ್ಯ ಹೃದಯದಲಿ ತೋರುವವನೇ ಗುರು ||೩||


ಗುರು ಮಹಾರಾಜ ಗುರು ಜೈ ಜೈ

ಪರಬ್ರಹ್ಮ ಸದ್ಗುರು ದಯಾಳ

ಪರಬ್ರಹ್ಮ ಸದ್ಗುರು ದಯಾಳ, ಪರಬ್ರಹ್ಮ ಸದ್ಗುರು ಕೃಪಾಲ

ಗುರು ಮಹಾರಾಜ್ ಗುರು ಜೈ ಜೈ

ಪರಬ್ರಹ್ಮ ಸದ್ಗುರು ಪರಬ್ರಹ್ಮ ಸದ್ಗುರು, ಪರಬ್ರಹ್ಮ ಸದ್ಗುರು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು