ರಾಮ ರಾಮ ಶ್ರೀ ರಘುರಾಮ - Rama Rama Sri Raghurama

|| ಶ್ರೀರಾಮ ಸ್ತುತಿ ||






ರಾಮ ರಾಮ ಶ್ರೀ ರಘುರಾಮ

ನೀಲಮೇಘಶ್ಯಾಮ ನಿಸ್ಸೀಮ

ಕಾಮಿತಾರ್ಥವ ಕರೆದತಿ ಪ್ರೇಮದಿಂದ

ಪಾಲಿಪುದು ನಿನ್ನ ನಾಮ ॥ ಪ ॥

ರಾಮ ರಾಮ ಶ್ರೀ ರಾಮ ರಾಮ ರಾಮ ರಘುರಾಮ

ಶ್ರೀರಾಮ ಜಯರಾಮ ಜಯ ಜಯ ರಾಮ

ರಾಮ ರಾಮ ಶ್ರೀ ರಘುರಾಮ

ನೀಲಮೇಘಶ್ಯಾಮ ನಿಸ್ಸೀಮ 


ಕಲ್ಲೋದ್ಧಾರಕ ಕರುಣಾಳು ರಾಮ

ಬಿಲ್ಲನೆತ್ತಿದ ಬಿರುದಾತ ರಾಮ 

ಸೊಲ್ಲು ಸೊಲ್ಲುಗಿರಲು ಹರಿನಾಮ

ಚಿಲ್ಲ್ಯಾಡುವ ದಯ ಅವರಲ್ಲಿ ಪ್ರೇಮ ॥ ೧॥ 


ಧೀರ ಪುರುಷನೆ ದಿಗ್ವಿಜಯ ರಾಮ

ವಾರಿಧಿಯ ಕಟ್ಟಿದ ವನಜಾಕ್ಷ ರಾಮ

ಕ್ರೂರ ರಾಕ್ಷಸನನ್ನು ಕೊಂದು

ಲಂಕಾ ಸೂರೆಯನು ಮಾಡಿದಂಥ ನಿಸ್ಸೀಮ ॥ ೨॥ 


ದುಷ್ಟ ರಾವಣ ಶತೃ ಶ್ರೀರಾಮ 

ಹುಟ್ಟಿ ಭಾನುವಂಶದಿ ಸೀತಾರಾಮ

ಮುಟ್ಟಿ ಭಜಿಸೆ ಸಜ್ಜನರಿಗೆ

ಭೀಮೇಶ ಕೃಷ್ಣ ಕರೆದು ನೀಡುವ ತನ್ನ ಧಾಮ ॥ ೩॥





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು