ಗುರುದೇವ ಪರಿಪೂರ್ಣ - Gurudeva Paripurna

|| ಗುರು ಸ್ತುತಿ ||





ಗುರುದೇವ ಪರಿಪೂರ್ಣ

ಶರಣಾದೆನು ರಕ್ಷಿಸಿ ಸಲಹೆನ್ನ ||ಪ ||


ಹಿತಶತ್ರುಗಳಿಹರೀ ಬಾಳಿನಲ್ಲಿ 

ಅತಿ ಮೋಹದ ಜಾಲಕ್ಕೆ ಬೀಳಿಸಿ ಮತಿಹೀನ ಕೃತಿಯಲ್ಲಿ 

ತೊಡಗಿಸು ತಿಹರೀಗಲೇ ಬಿಡಿಸೆನ್ನ ||೧||


ಕ್ಷಣಮಾತ್ರದ ಈ ಸುಖಕಾಗಿ

ಕುಣಿದಾಡುವ ಇಂದ್ರಿಯ ಭೋಗದಿ

ಹಣ್ಣಾದೆ ಗುರುದೇವ ಇನ್ನಾದರೂ ರಕ್ಷಿಸಿ ಸಲಹೆನ್ನ ||೨||


ಕೊಡು ನಿನ್ನಯ ಸ್ಮರಣೆಯ ನಿರುತ

ಕಡೆ ಹಾಯಿಸಿ ನೀ ಕಾಪಾಡುತ್ತ 

ದೃಢ ಸಚ್ಚಿದಾನಂದ 

ಗುರು ಶಂಕರ ದತ್ತ ದಯಾಪೂರ್ಣ ||೩||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು