|| ಗುರು ಸ್ತುತಿ |
ಶ್ರೀ ಗುರುವೆ ಅರುವೆ ಶರಣಾಗಿ ಬರುವೆ
ಕರುಣೆಯನು ಕೋರಿ ಬರುವೆ
ಹೃತ್ ಪ್ರಕೃತಿ ತಂದ ಬಿಡಿ ಹೂವುಗಳನ್ನ
ಶ್ರೀಚರಣಕೆರೆಯುತಿರುವೆ
ಆ ಪಾದ ಪದ್ಮ ಎದೆಗವಚಿ ಹಿಡಿದು
ನಡು ನೆತ್ತಿಗೊತ್ತಿ ಕೊಂಬೆ
ಉಸಿರಿಂದಲದನೆ ಬಲಗೊಂಬೆ
ನನ್ನ ಕಣ್ಗೊಂಬೆಗೊತ್ತಿಕೊಂಬೆ
ಕಣ್ಣಿಂದ ನಿನ್ನ ನನ್ನನ್ನ ಸೇರಿ
ಎದೆಯೊಳನ ಬೆಳಕನೆತ್ತಿ
ತಿರುಮೂರ್ತಿ ಮಾಡು ನನ್ನನ್ನು ನಿನ್ನ
ಚಿನ್ಮೋದ ಬೋಧ ಬಿತ್ತಿ
ಭವಭವಕೆ ನನ್ನ ಮುಂದೆತ್ತಿ ಒತ್ತಿ
ತಂದಥ ತಂದೆ ನೀನು
ಭಾವಕ್ಕೆ ಇಳಿದು ಸದ್ಭಾವ ಬರಿಸಿ
ಬರುವಂತೆ ಮಾಡು ನಾನು
ಅಂತರ್ಯದೊಂದು ಚೈತನ್ಯ ನಿನ್ನ
ಕೈಂಕರ್ಯ ಕರ್ತೃವಾಗಿ
ಕ್ಷೇತ್ರಜ್ಞ ಬರಲಿ ಚೇತ್ಯೇಶನಾಗಿ
ಮಧುಬೋಧ ಮೋದನಾಗಿ
0 ಕಾಮೆಂಟ್ಗಳು