ಬಿಂದು ಮಾಧವ ಪಾಹಿಮಾಂ - Bindu Madhava Pahimam

||ಪರಮ ಸದ್ಗುರು ಶ್ರೀ ಬಿಂದು ಮಾಧವ ಸ್ತುತಿ ||




ಬಿಂದು ಮಾಧವ ಬಿಂದು ಮಾಧವ

ಬಿಂದು ಮಾಧವ ಪಾಹಿಮಾಂ

ಬಿಂದು ಮಾಧವ ಬಿಂದು ಮಾದವ

ಬಿಂದು ಮಾಧವ ರಕ್ಷಮಾಂ


ವಸಂತ ಮಾಸದ ದಶಮಿಯಂದೆ ಬಿಂದು ಜನಿಸಿದ ಆ ದಿನ

ಜಗದ ಮಂಗಳ ರೂಪ ತಿಳಿದವ ಭೂಮಿಗಿಳಿದ ಶುಭದಿನ

ಲಕುಮಿ ನಂದನ ಭಕುತ ಬಂಧು ವಶಿಷ್ಠ ವಂಶಜ ಗುರುವರ

ಲೋಕರಕ್ಷಕ ಭಕುತ ಭೂಷಿತ ಹನುಮ ರೂಪ ಕೃಪಾಕರ


ದೈತ್ಯ  ನಾಶಕ ಧೀನ ರಕ್ಷಕ ನಿತ್ಯ ಸದ್ಗುಣ ಬಿಂದುವು

ವ್ಯಾಧಿ ನಾಶಕ ಲೋಕ ರಕ್ಷಕ ಮಂತ್ರದಾಯಕ ಮಾಧವ

ಅತಿಥಿ ಸೇವೆಯ ಕೆಲಸ ಮಾಳ್ಪರ ಮಾರ್ಗದರ್ಶಕ ವಿಗ್ರಹ

ಅತಿಥಿ ಜನರ ಸತತ ಸೇವೆಗೆ ಪೂಜೆಯಷ್ಟೇ ಆಗ್ರಹ


ಸೇವೆ ಅನುದಿನ ಕರ್ಮಸಾಧಕ ತತ್ವ ಬೋಧಕ ಯತಿ ವರ

ಸಾಧು ಪೂಜಕ ಭಕ್ತ ಪಾಲಕ ದೀನ ರಕ್ಷಕ ಮುನಿವರ

ಭಜಕ ದಾಯಕ ಕರ್ಮ ಕಾರಕ  ಸರಳ ಸಾತ್ವಿಕ ನಿಜ ಪದ

ವೇಣುವಾದಕ ತಾಳ ಮೋಹಕ ಬಿಂದು ಕೀರ್ತಿಯ ಅನುಪದ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು