|| ಗೋವಿಂದ ಸ್ತುತಿ ||
ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ
ಸಂಗ ಸುಖವನಿತ್ತು ಕಾಯೋ ಕರುಣಾ ಸಾಗರ|ಪಾಂಡು|
||ಪ॥
ಅರಿಯರೊ ನೀನಲ್ಲದೆ ಬೇರನ್ಯ ದೇವರ ಮರೆಯರೋ |
ನೀ ಮಾಡಿದ ಅನಿಮಿತ್ತುಪಕಾರ |ಪಾಂಡು। ॥ ೧॥
ತೊರೆಯರೋ ನಿನ್ನಂಘ್ರಿ ಸೇವ ಪ್ರತಿವಾಸರ
ಅರಿಯರೋ ಪರತತ್ವವಲ್ಲದ ಇತರ ವಿಚಾರ|ಪಾಂಡು।
॥ ೨॥
ಮೂಕಬಧಿರರಂತಿಪ್ಪರೋನೋಳ್ಪ ಜನಕೆ|
ಕಾಕುಯುಕುತಿಗಳನ್ನವರು ತಾರರೋ ಮನಕೆ|ಪಾಂಡು।
॥ ೩॥
ಸ್ವೀಕರಿಸರೋ ದೇವ ಅನರ್ಪಿತ ಒಂದು ಕಾಲಕ್ಕೆ |
ಆ ಕೈವಲ್ಯದ ಭೋಗ ಸುಖಗಳು ಅವರಿಗೆ ಬೇಕೇ|ಪಾಂಡು| ॥ ೪॥
ಜಯಾಜಯಲಾಭಾಲಾಭ ಮಾನಾಪಮಾನ |
ಭಯಾಭಯ ಸುಖದುಃಖ ಲೋಷ್ಠ ಕಾಂಚನ|ಪಾಂಡು।
||೫॥
ಪ್ರಿಯಾಪ್ರಿಯ ನಿಂದಾಸ್ತುತಿಗಳೆಲ್ಲ ಅನುದಿನ |
ಶ್ರೀಯರಸನ ಚಿಂತಿಸುವರೋ ನಿನ್ನ ಅಧೀನ|ಪಾಂಡು।
॥ ೬॥
0 ಕಾಮೆಂಟ್‌ಗಳು