|| ಗೋವಿಂದ ಸ್ತುತಿ ||
ರಚನೆ : ಶ್ರೀ ವಾದಿರಾಜರು
ವೇಣುನಾದಪ್ರಿಯ ಗೋಪಾಲಕೃಷ್ಣ ॥ಪ॥
ವೇಣುನಾದ ವಿನೋದ ಮುಕುಂದ
ಗಾನ ವಿನೋದ ಶೃಂಗಾರ ಗೋಪಾಲ ॥ಅಪ॥
ವಂದಿತ ಚರಣ ವಸುಧದೆಯಾಭರಣ
ಇಂದಿರಾ ರಮಣ ಇನಕೋಟಿತೇಜ
ಮಂದರಧರ ಗೋವಿಂದ ಮುಕುಂದ
ಸಿಂಧುಶಯನ ಹರಿ ಕಂದರ್ಪ ಜನಕ ॥ ೧॥
ನವನೀತಚ ಜೋರ ನಂದಕುಮಾರ
ಭುವನೈಕ ವೀರ ಬುದ್ಧಿ ವಿಸ್ತಾರ
ರವಿಕೋಟಿ ತೇಜ ರಘುವಂಶ ರಾಜ
ದಿವಿಜ ವಂದಿತ ದನುಜಾರಿ ಗೋಪಾಲ ॥ ೨॥
ಪರಮದಯಾಳು ಪಾವನ ಮೂರ್ತಿ
ವರಕೀರ್ತಿ ಹಾರ ಶೃಂಗಾರ ಲೋಲ
ಉರಗೇಂದ್ರ ಶಯನ ವರ ಹಯ ವದನ
ಶರಣ ರಕ್ಷಕ ಪಾಹಿ ಕೋದಂಡ ರಾಮ ॥ ೩॥
0 ಕಾಮೆಂಟ್ಗಳು