|| ಗೋವಿಂದ ಸ್ತುತಿ ||
ಬಾರಯ್ಯ ಗೋವಿಂದ ಬಂಧಕವ ಬಿಡಿಸೋ||2||
ದೇಹವೆಂಬುವ ಬಂಡಿ ಎಳೆದು
ಬಳಲಿದೆನೋ... ||ಬಾರಯ್ಯ||
ಬಾರಯ್ಯ ಗೋವಿಂದ ಬಂಧಕವ ಬಿಡಿಸೋ.....
ಮಲಮೂತ್ರ ದುರ್ಮಾಂಸ
ಕರುಳ ಒಳ ದುರ್ಗಂಧ
ಎಲುಬು ಗುಂಡಿಗೆ ಧ್ರತವು ,ಹೊದಿಕೆ ಚರ್ಮ
||ಮಲಮೂತ್ರ||
ಇದರೊಳಗೆ ಸಿಕ್ಕಿದೆನು
ಇನ್ನಾರು ಗತಿ ಎನಗೆ||ಇದರೊಳಗೆ||
ಬಿಡಿಸಯ್ಯಾ ಭವಬಂಧ
ಎನ್ನೊಡೆಯ ಗೋವಿಂದ
||ಬಾರಯ್ಯ||
ಇನ್ನು ಜನ್ಮವು ಸಾಕು ,ಇದನ್ನು ವರ್ಜಿಸಬೇಕು
ಮನ್ಮಥನ ಠಾಣ್ಯವಿದು , ಮರುಳು ಮಾಡಿ
||ಇನ್ನು ಜನ್ಮವು||
ಅಂತಕನ ಪಟ್ಟನಕ್ಕೆ ಹಾದಿ ನೋಡುತ್ತಲಿದೆ||2||
ದಯವಿಟ್ಟು ಸಲಹೋ ವೈಕುಂಠ ವಿಠ್ಠಲನೆ||2||
||ಬಾರಯ್ಯ||
ಅತಿಮೂರ್ಖ ನಾನಯ್ಯ ,ಅಜ್ಞಾನ ಬಿಡಿಸಯ್ಯಾ
ನಿಜವಲ್ಲ ಈ ಕಾಯ , ನಂಬಲಾರೆನಯ್ಯ
||ಅತಿಮೂರ್ಖ||
ಭಯಪಟ್ಟು ನಿಮ್ಮಪಾದ
ಭಜಿಸಿದೆನು ನಾನಯ್ಯ||ಭಯ||
ಶ್ರೀ ಚೆಲುವ ರಂಗಯ್ಯ ಸಲಹಬೇಕಯ್ಯ||2||
||ಬಾರಯ್ಯ||
ಕನಕದಾಸರ ಮನೆಯ
ಕಸ ಗುಡಿಸೋ ಬಡ ದಾಸ
ಪುರಂದರದಾಸರಿಗೆ ಮಣಿ ಮಾಡೋ ದಾಸ
||ಕನಕದಾಸರ||
ನಿನ್ನ ನಂಬಿದ ದಾಸ
ಎನ್ನ ಬಿಡುವುದು ಮೋಸ||ನಿನ್ನ||
ಕೈವಾರದ ಪುರವಾಸ,ಅಮರನಾರಯಣೇಶ||2||
||ಬಾರಯ್ಯ||
0 ಕಾಮೆಂಟ್‌ಗಳು