|| ಹರಿ ಸ್ತುತಿ ||
ಹರಿದಾಸರ ಸಂಘಕೆ ಸರಿಯುಂಟೆ
ಗುರು ಕರುಣಕೆ ಇನ್ನು ಪಡಿಯುಂಟೆ ದೇವ
||ಹರಿದಾಸರ||
ದಾವನಲಣ ತಪ್ಪಿಸಿ ಕಾಡಾನೆಯ
ದೇವಗಂಗೆಗೆ ತಂದು ಹೊಗಿಸಿದಂತೆ
||ದಾವನಲಣ||
ಆವರಿಸಿರುವ ಷಡ್ವರ್ಗವ ತಪ್ಪಿಸಿ||2|
ಶ್ರೀವರನ ಕರುಣಾ ರಸದಿ ತೋಯಿಸುವ
||ಹರಿದಾಸರ||
ಕಂದಿಬೇಸಗೆಯಲ್ಲಿ ನೊಂದ ಚಕೋರಕ್ಕೆ
ಇಂದುಬಿಂಬದಿ ತಂದು ಹೊಗಿಸಿದಂತೆ
||ಕಂದಿಬೇಸಗೆಯಲ್ಲಿ||
ಕುಂದದೆ ಮಮತೆಯ ನೊಂದಿಸಿ ಎನ್ನ||2||
ಗೋವಿಂದನ ಪಾದ ಸನ್ನಿಧಿಯ ಸೇರಿಸುವ
||ಹರಿದಾಸರ||
ತಡೆ ನೀರಿಗೆ ಹರಿಯುವ ತೊರೆಯಲ್ಲಿ
ಪೋಪರ ಪಿಡಿದೆತ್ತಿ ದಡಕ್ಕೆ ಸೇರಿಸಿದಂತೆ
||ತಡೆ ನೀರಿಗೆ||
ಕಡೆಗೆಟ್ಟು ಸಂಶ್ರೀತಿಯೊಳಗೆ ಸಿಕ್ಕಿದೆನ್ನ||2||
ಬಿಡದೆ ಶ್ರೀಕ್ರಷ್ಣನಂಘ್ರಿಗಳ ಸೇರಿಸುವ
||ಹರಿದಾಸರ||
0 ಕಾಮೆಂಟ್ಗಳು