|| ಆಂಜನೇಯ ಭಜನೆ ||
ರೋಮ ರೋಮ ಕಣ್ಣಿನಲ್ಲಿ
ರಾಮನಾಮ ತುಂಬಿಕೊಂಡು
ರಾಮನನ್ನೇ ಅಪ್ಪಿಕೊಂಡ ಹನುಮಂತ
ಹನುಮಂತ ನಿಜ ಘನವಂತ||2||
ಸ್ವಾಮಿ ರಾಮ ಎನ್ನುತ್ತಾ
ಗತಿ ನೀನೇ ಎನ್ನುತ್ತಾ
ಪ್ರಾಣನಾಥ ಶ್ರೀ ರಾಮದೂತ||4||
ಅಂಜನಿಯ ಮುದ್ದುಕಂದ
ಆಂಜನೇಯ ವೀರಧೀರ
ಸಂಜೀವನ ರಾಯವರ ವಾಯುತನಯ
ವರ ವಾಯುತನಯಾ||ಅಂಜನಿಯ||
ಇಂದ್ರವರುಣ ಯಮನು ಕೊಟ್ಟ
ಅಷ್ಠಸಿದ್ಧಿ ವರಗಳಿಂದ
ತೊಂದರೆಯ ಕಳೆದು ಚಿರಂಜೀವಿಯಾದ
ಚಿರಂಜೀವಿಯಾದ...
ವಿಶ್ವಕರ್ಮ ಕೊಟ್ಟಸ್ವರ್ಣ
ಕರ್ಣಕುಂಡಲದಿ ಹೊಳೆದು
ವಿಜಯವೀರ ಶೂರನಾಗಿ
ಧೀರನಾದ ಶೂರ ಧೀರನಾದ
ಪರಬ್ರಹ್ಮ ಭೂಮಿತಾಯ ಕರುಣೆಯ ಪರಿಯಿಂದ
ವೇದಶಾಸ್ತ್ರವೆಲ್ಲಾ ತಿಳಿದು ಜ್ಞಾನಿಯಾದ
ಮಹಾ ಜ್ಞಾನಿಯಾದ...
ಪ್ರಾಣನಾಥ ಶ್ರೀ ರಾಮದೂತ||4||
ಕಿಷ್ಕಿಂದೆಗೆ ಬಂದು ಸೇರಿ
ಸುಗ್ರೀವನ ಮಂತ್ರಿಯಾಗಿ
ಅಗ್ರಸ್ಥಾನ ಮಾನದಿಂದ ಸಿಧ್ಧನಾದ
ಪ್ರಸಿಧ್ಧನಾದ ||ಕಿಷ್ಕಿಂದೆ||
ಉಗ್ರನೇಮ ನಿಷ್ಠೆಲಿ
ಸಮಗ್ರ ವಿದ್ಯೆ ಓಡಿ ಕಲಿತ
ತಾಪಧಾರಿ ಸೂರ್ಯನಲ್ಲಿ ತಾಪಹಾರಿ
ರುದ್ರಾವತಾರಿ
ಸೂರ್ಯದೇವಗೆದುರು ನಿಂತು
ವೇದಶಾಸ್ತ್ರವೆಲ್ಲ ಕಲಿತು
ವ್ಯೋಮಹಾದಿಯಲ್ಲಿ ಹಾರಿ ಧೀರನಾದ
ಗಂಭೀರನಾದ
ಜಗದಪ್ರಾಣ ವರ ಪವಮಾನ ಕರುಣ
ಮುಖ್ಯಪ್ರಾಣ ಹನುಮಂತ ಅಸಮಾನ್ಯ
ಅವ ದೆಸೆಮಾನ್ಯ
ಪ್ರಾಣನಾಥ ಶ್ರೀ ರಾಮದೂತ||4||
ಮಂದಗಮನೆ ಸೀತೆಗಾಗಿ
ಲಂಕೆಗೆ ಹಾರಿ ದಾಟಿ ಸೇರಿ
ಸುಂದರಿ ಜಾನಕಿಗೆ ಬಂದು ನಮಿಸಿದ
ತಾ ಬಂದು ನಮಿಸಿದಾ||ಮಂದಗಮನೆ||
ತಂದು ಮುದ್ರೆ ಉಂಗುರವ
ಇಂಗಿಸುತ ಸೀತೆಭಂಗ
ತಂದೆ ರಾಮನಂದ ಮಾತ
ನೊಂದು ಹೇಳಿದ
ಮಾತ ನೊಂದು ಹೇಳಿದ
ಅಂಧಕಾಮ ರಾವಣನ ಕೊಂದು
ಬರಲು ಬಂದ ರಾಮ ಸಿಂಧುವನ್ನು
ದಾಟಲು ಬಂಧ ಕಟ್ಟಿದ ಸೇತುಬಂಧ ಕಟ್ಟಿದ
ಅಂಜದ ರಾವಣನ ಕೊಂದೂ||2||
ಕಂಜನಾಭನು ಬಂದು ಸಂಭ್ರಮದಿ
ಹನುಮನ ಬಂದು ಅಪ್ಪಿದ
ಅವನ ಭಕ್ತಿಗೊಪ್ಪಿದ
ಪ್ರಾಣನಾಥ ಶ್ರೀ ರಾಮದೂತ||4||
0 ಕಾಮೆಂಟ್‌ಗಳು